ಮ್ಯಾಕೋ ಚುನಾವಣೆ: ಐವನ್ ಡಿಸೋಜ ಬಣಕ್ಕೆ ಗೆಲುವು
ಮಂಗಳೂರು, ಆ.20: ಮಂಗಳೂರಿನ ಪ್ರಮುಖ ಸಹಕಾರಿ ಸಂಘಗಳಲ್ಲಿ ಒಂದಾದ ಮ್ಯಾಕೋ ಸೊಸೈಟಿ ಕಾರು-ರಿಕ್ಷಾ ಚಾಲಕರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದ ಬಣಕ್ಕೆ ಗೆಲುವು ಆಗಿದೆ.
ಐವನ್ ಡಿಸೋಜ ನೇತೃತ್ವ ತಂಡ 17 ಸ್ಥಾನಗಳಿಗೆ ಸ್ಪರ್ಧಿಸಿದ್ದು, ಎಲ್ಲಾ ಕಡೆಯೂ ಗೆದ್ದಿವೆ. ಸುಮಾರು 1600ಕ್ಕೂ ಅಧಿಕ ಮತದಾರರರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.
ಕಳೆದ 5 ವರ್ಷದಿಂದ ಮ್ಯಾಕೋ ಸೊಸೈಟಿಯಲ್ಲಿ ಐವನ್ ಡಿಸೋಹ ಅಧ್ಯಕ್ಷರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ರಾಜೇಶ್, ಎ.ವಸಂತ ಶೆಟ್ಟಿ, ಸಿರಿಲ್ ಡಿಸೋಜ, ಬಿ. ಸಂಜೀವ ಒಕ್ಕಲಿಗ, ಗ್ರೆಗೋರಿ ವೇಗಸ್, ಜೆರಾಲ್ಡ್ ಪಿಂಟೊ, ಪಿಯೂಸ್ ಮೊಂತೆರೊ, ಡಿ. ಹಬೀಬುಲ್ಲಾ, ಬಂಟ್ವಾಳದಿಂದ ಎಡ್ವರ್ಡ್ ಅಲ್ವಿನ್ ಫೆರ್ನಾಂಡಿಸ್, ಪುತ್ತೂರಿನಿಂದ ಜೇಮ್ಸ್ ಜೆ ಮಾಡ್ತಾ, ಹಿಂದುಳಿದ ವರ್ಗದಿಂದ ಸದಾನಂದ ಎಂ. ಚಂದ್ರಶೇಖರ್, ಮಹಿಳಾ ಕ್ಷೇತ್ರದಿಂದ ಬಬಿತಾ ಡಿಸೋಜ, ವಿದ್ಯಾ ವಿನಯ ಥೋರಸ್, ಪರಿಶಿಷ್ಟ ಜಾತಿಯಿಂದ ದಾಮೋದರ, ಪರಿಶಿಷ್ಟ ಪಂಗಡದಿಂದ ರಾಘವ ಆಯ್ಕೆಯಾಗಿದ್ದಾರೆ.