ಫಾದರ್ ಮುಲ್ಲರ್ ಸಂಸ್ಥೆಯಿಂದ ಡಾ.ಅಲೋಶಿಯಸ್ ಪಾವ್ಲ್ ಡಿಸೋಜರಿಗೆ ಬೀಳ್ಕೊಡುಗೆ
ಮಂಗಳೂರು, ಆ.21: ಮಂಗಳೂರು ಕೆಥೊಲಿಕ್ ಕ್ರೈಸ್ತ ಧರ್ಮ ಪ್ರಾಂತದ ನಿರ್ಗಮಿತ ಬಿಷಪ್ ಅತಿ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜರಿಗೆ ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಂಕನಾಡಿಯ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಫಾದರ್ ಮುಲ್ಲರ್ ಸಂಸ್ಥೆಗೆ ಸುದೀರ್ಘ ಸೇವೆ ಮತ್ತು ಮಾರ್ಗದರ್ಶನ ನೀಡಿದ ಬಿಷಪ್ರನ್ನು ಸಂಸ್ಥೆಯ ವಿವಿಧ ಘಟಕಗಳ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭ ನೂತನ ಬಿಷಪ್ ಅತಿ.ವಂ.ಪೀಟರ್ ಪಾವ್ಲ್ ಸಲ್ದಾನಾ, ಫಾದರ್ ಮುಲ್ಲ್ಲರ್ ಚಾರಿಟೇಬಲ್ ಸಂಸ್ಥೆಗಳು ಹಾಗೂ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಹೋಮಿಯೋಪಥಿ ಕಾಲೇಜುಗಳ ಆಡಳಿತ ನಿರ್ದೇಶಕ ರಿಚರ್ಡ್ ಕುವೆಲ್ಲೊ, ಬಿಷಪ್ ಹೌಸ್ನ ವಿಕಾರ್ ಜನರಲ್ ಡೆನಿಸ್ ಮೊರಸ್ ಪ್ರಭು ಹಾಗೂ ವಿವಿಧ ಸಹ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
Next Story