ಆ.22: ಸಚಿವೆ ಜಯಮಾಲ ಉಡುಪಿಗೆ
ಉಡುಪಿ, ಆ.21: ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ನಾಲ್ಕು ದಿನಗಳ ಉಡುಪಿ ಜಿಲ್ಲಾ ಭೇಟಿಗಾಗಿ ನಾಳೆ ಆ.22ರಂದು ಸಂಜೆ 6:30ಕ್ಕೆ ಉಡುಪಿಗೆ ಆಗಮಿಸಲಿದ್ದು, ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
23 ಮತ್ತು 24ರಂದು ಅವರು ಬೆಳಗ್ಗೆ 9 ರಿಂದಸಂಜೆ 6 ರವರೆಗೆ ಜಿಲ್ಲೆಯಲ್ಲಿ ಆ.31ರಂದು ಮತದಾನ ನಡೆಯಲಿರುವ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ವಿವಿಧ ವಾರ್ಡು ಗಳಲ್ಲಿ ಮತಯಾಚನೆ ನಡೆಸಲಿದ್ದಾರೆ. ಆ.25ರಂದು ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story