ಕೊಡಗು ಸಂತ್ರಸ್ತರಿಗೆ ದ.ಕ ಜಿಲ್ಲಾಡಳಿತದಿಂದ ನೆರವು: ಅಗತ್ಯ ವಸ್ತುಗಳ ಹಸ್ತಾಂತರ
ಮಂಗಳೂರು, ಆ.21: ಭಾರೀ ಮಳೆಯಿಂದಾಗಿ ಜಲ ಪ್ರವಾಹ ಹಾಗೂ ಭೂಕುಸಿತಕ್ಕೆ ಒಳಗಾಗಿರುವ ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ದ.ಕ. ಜಿಲ್ಲಾಡಳಿತ ವತಿಯಿಂದ ಸಾರ್ವಜನಿಕರಿಂದ ಸ್ವೀಕರಿಸಲಾದ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಯಿತು.
ಸ್ಯಾನಿಟರಿ ನ್ಯಾಪ್ಕಿನ್ಸ್ ಮತ್ತು ಡೈಪರ್ಸ್- 295 ಪ್ಯಾಕೇಟ್, ಪ್ಲಾಸ್ಟಿಕ್ ಮ್ಯಾಟ್ಸ್- 10 ಬಾಕ್ಸ್, ಟಾರ್ಚೆಸ್(ಬ್ಯಾಟರಿ)- 5 ಬಾಕ್ಸ್, ಡೆಟಾಲ್, ಸೋಪ್ಸ್, ಶಾಂಪೂ, ಟೂಥ್ಪೇಸ್ಟ್, ಟೂಥ್ಬ್ರೇಷ್- 10 ಬಾಕ್ಸ್, ಕ್ಯಾಂಡಲ್, ಬೆಂಕಿಪೊಟ್ಟಣ- 26 ಪ್ಯಾಕೇಟ್, ಟವಲ್, ಬ್ಲಾಂಕೇಟ್, ಲುಂಗಿ, ನೈಟಿ, ಶರ್ಟ್, ಟಿ-ಶರ್ಟ್, ಬ್ಯಾಗ್- 22 ಬಾಕ್ಸ್, ಸೊಳ್ಳೆ ನಿವಾರಕಗಳು- 43 ಪ್ಯಾಕೇಟ್, ಅಡುಗೆ ತೈಲ- 2 ಲೀಟರ್, ಬಕೇಟ್, ಮಗ್ಸ್- 10, ತಲೆದಿಂಬು- 15, ಗಮ್ಬೂಟ್ಸ್- 1 ಬಾಕ್ಸ್, ನೀರಿನ ಬಾಟಲ್- 4 ಬಾಕ್ಸ್ ಅಗತ್ಯ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story