ಚಲಿಸುತ್ತಿದ್ದ ಕಾರಿನ ಮೇಲೆ ರಾಡ್ ಬಿದ್ದು ಹಾನಿ
ಮಂಗಳೂರು, ಆ.21: ನಗರದ ಮರವೂರು ಸಮೀಪ ರೈಲ್ವೆ ಮೇಲ್ಸೇತುವೆಯಿಂದ ರಾಡೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಹಾನಿಯಾದ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ ಕಂಟೈನರ್ ಹೇರಿಕೊಂಡು ಹೋಗುವ ಲಾಂಗ್ ಚೇಸ್ ಲಾರಿ ಹಿಟಾಚಿ ಹೇರಿಕೊಂಡು ಮಂಗಳೂರು ಕಡೆಗೆ ಬರುತ್ತಿತ್ತು. ಈ ಸಂದರ್ಭ ಮಂಗಳೂರು ಕಡೆಯಿಂದ ಹೋಂಡಾ ಸಿಟಿ ಕಾರೊಂದು ಬಜಪೆಗೆ ಹೋಗುತ್ತಿತ್ತು. ಲಾರಿ ರೈಲ್ವೆ ಬ್ರಿಡ್ಜ್ ಸಮೀಪ ಹೋಗುವಾಗ ಹಿಟಾಚಿ ತಾಗಿ ರಾಡೊಂದು ಕೆಳಗೆ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಇದರಿಂದ ಕಾರಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹಿಟಾಚಿ ಚಾಲಕನ ವಿರುದ್ಧ ಸುರತ್ಕಲ್ ಸಂಚಾರ ಠಾಣೆಗೆ ದೂರು ನೀಡಲಾಗಿದೆ.
ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆ ವಿರುದ್ಧ ಪ್ರಕರಣ ದಾಖಲಾಗಿದೆ.
Next Story