ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಉಡುಪಿಯಲ್ಲಿ 28 ನಾಮಪತ್ರಗಳು ತಿರಸ್ಕೃತ
ಉಡುಪಿ, ಆ.21: ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಆ.20 ರಂದು ನಡೆದ ನಾಮಪತ್ರ ಪರಿಶೀಲನೆ ನಂತರ ಉಡುಪಿ ನಗರಸಭೆಯ 35 ವಾರ್ಡ್ಗಳಿಗೆ ಸಲ್ಲಿಸಿಕೆಯಾಗಿದ್ದ 98 ನಾಮಪತ್ರಗಳಲ್ಲಿ 3 ನಾಮಪತ್ರಗಳು ತಿರಸ್ಕೃತವಾಗಿವೆ. 95 ಕ್ರಮಬದ್ಧವಾಗಿವೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ನ 16 ವಾರ್ಡ್ಗಳಿಗೆ ಸಲ್ಲಿಸಲಾಗಿದ್ದ 63 ನಾಮಪತ್ರಗಳಲ್ಲಿ 16 ನಾಮಪತ್ರ ತಿರಸ್ಕೃತವಾಗಿದ್ದು, 47 ಕ್ರಮಬದ್ಧವಾಗಿವೆ.
ಕುಂದಾಪುರ ಪುರಸಭೆಯ 23 ವಾರ್ಡ್ಗಳಿಗೆ ಸಲ್ಲಿಸಿದ್ದ 81 ನಾಮಪತ್ರಗಳಲ್ಲಿ 5 ನಾಮಪತ್ರಗಳು ತಿರಸ್ಕೃತವಾಗಿದ್ದು, 75 ಕ್ರಮಬದ್ಧವಾಗಿವೆ.
ಕಾರ್ಕಳ ಪುರಸಭೆಯ 23 ವಾರ್ಡ್ಗಳಿಗೆ ಸಲ್ಲಿಕೆಯಾಗಿರುವ 59 ನಾಮಪತ್ರಗಳಲ್ಲಿ 4 ನಾಮಪತ್ರ ತಿರಸ್ಕೃತವಾಗಿದ್ದು, 57 ಕ್ರಮಬದ್ಧವಾಗಿವೆ.
ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಆ.23 ಕೊನೆಯ ದಿನವಾಗಿದ್ದು, ಅದೇ ದಿನ ಸಂಜೆಯ ವೇಳೆ ಸ್ಪರ್ಧಾಕಣದ ಸ್ಪಷ್ಟ ಚಿತ್ರಣ ತಿಳಿದುಬರಲಿದೆ.
Next Story