ಕಾಪು: ಮದ್ರಸ ಕಟ್ಟಡ ಉದ್ಘಾಟನೆ
ಕಾಪು, ಆ. 24: ಕಾಪು ಪೊಲಿಪು ಜುಮಾ ಮಸೀದಿ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಮದ್ರಸ ಪೊಲಿಪು ಇದರ ನವೀಕೃತ ಕಟ್ಟಡದ ಉದ್ಘಾಟನೆ ಶುಕ್ರವಾರ ಜುಮಾ ನಮಾಝಿನ ಬಳಿಕ ನಡೆಯಿತು.
ದಿ.ಉಸ್ಮಾಲ್ ಅಬೂಬಕರ್ ಕಾಪು ಇವರ ಸ್ಮರಣಾರ್ಥ ಡಾ. ಕಾಪು ಮುಹಮ್ಮದ್ ಮತ್ತು ಕುಟುಂಬಸ್ಥರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮದ್ರಸ ಕಟ್ಟಡವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಸೀದಿಯ ಖತೀಬ್ ಇರ್ಷಾದ್ ಸಅದಿ ಆಶೀರ್ವಚನ ನೀಡಿದರು.
ಮಾಜಿ ಖತೀಬ್ ಪಿ.ಬಿ.ಅಹಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ದಾನಿ ಡಾ. ಕಾಪು ಮುಹಮ್ಮದ್, ಅಡ್ವಕೇಟ್ ಮುಹಮ್ಮದ್ ಆಲಿ, ಮಸೀದಿ ಸಮಿತಿಯ ಅಧ್ಯಕ್ಷ ಕೆ.ಎಸ್.ಅಬ್ಬಾಸ್, ಉಪಾಧ್ಯಕ್ಷ ಹಾಜಿ ಅಮೀರ್ ಹಂಝ, ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್, ಕೆ. ಅಬ್ದುಲ್ ಕಾಪು ಹನೀಫ್, ಕಾಪು ಅಬ್ದುಲ್ ರಹಿಮಾನ್, ಗುತ್ತಿಗೆದಾರ ಇರ್ಫಾನ್ ಉಪಸ್ಥಿತರಿದ್ದರು.
Next Story