ಆ.25 : ಮಣಿಪಾಲದಲ್ಲಿ ಸೆಲ್ಫಿ ವಿದ್ ಸಹಿ ಸಂಗ್ರಹ
ಉಡುಪಿ, ಆ.24: ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ಗಳ ಸಹಯೋಗದೊಂದಿಗೆ ಮಾದಕ ವ್ಯಸನ ವಿರೋಧಿ ಮಾಸಾಚಾರಣೆ ಅಂಗವಾಗಿ ಸೆಲ್ಫಿ ವಿದ್ ಸಹಿ ಸಂಗ್ರಹ ಜಾಗೃತಿ ಅಭಿಯಾನವನ್ನು ಮಣಿಪಾಲದ ಕೆನರಾ ಮಾಲ್ನಲ್ಲಿ ಆ.25 ರಂದು ಬೆಳಿಗ್ಗೆ 10:30 ರಿಂದ ಸಂಜೆ 4ಗಂಟೆಯವರೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ಸ್ವಾಮೀಜಿ, ಉಡುಪಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಮುಸ್ಲಿಂ ಧರ್ಮಗುರುಗಳು, ಚಿತ್ರನಟರು ಭಾಗವಹಿಸಲಿ ರುವರು. ಭಾಗವಹಿಸಿದ 5 ಮಂದಿ ಅದೃಷ್ಟಶಾಲಿಗಳಿಗೆ ಗಿಫ್ಟ್ ವೋಚರ್ ಪಡೆಯುವ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
Next Story