ವೇಟ್ಲಿಫ್ಟರ್ ವಿಕಾಸ್ ಠಾಕೂರ್ಗೆ 8ನೇ ಸ್ಥಾನ
ಜಕಾರ್ತ, ಆ.25: ಏಶ್ಯನ್ ಗೇಮ್ಸ್ನಲ್ಲಿ ಭಾರತದ ವೇಟ್ಲಿಫ್ಟರ್ಗಳ ಕಳಪೆ ಪ್ರದರ್ಶನ ಮುಂದುವರಿದಿದೆ. ಶನಿವಾರ ನಡೆದ ಪುರುಷರ 94 ಕೆಜಿ ತೂಕ ವಿಭಾಗದ ಸ್ಪರ್ಧೆಯಲ್ಲಿ ವಿಕಾಸ್ ಠಾಕೂರ್ 8ನೇ ಸ್ಥಾನ ಪಡೆದಿದ್ದಾರೆ.
ಠಾಕೂರ್ ಒಟ್ಟು 335 ಕೆಜಿ(145+190 ಕೆಜಿ)ತೂಕ ಎತ್ತಿ ಹಿಡಿದಿದ್ದಾರೆ. ಠಾಕೂರ್ ಎರಡು ಪ್ರಯತ್ನದಲ್ಲಿ ವಿಫಲರಾದ ಬಳಿಕ ಸ್ಯ್ನಾಚ್ನಲ್ಲಿ 145 ಕೆಜಿ ಎತ್ತಿ ಹಿಡಿದರು. ಕ್ಲೀನ್ ಹಾಗೂ ಜರ್ಕ್ನಲ್ಲಿ 190 ಕೆಜಿ ಎತ್ತಿದ ಬಳಿಕ ಕೊನೆಯ ಎರಡು ಪ್ರಯತ್ನದಲ್ಲಿ 197 ಕೆಜಿ ತೂಕ ಎತ್ತಲು ವಿಫಲರಾದರು.
ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಇರಾನ್ನ ಸೊಹ್ರಾಬ್ ಮೊರಾಡಿ ಸ್ನಾಚ್ನಲ್ಲಿ ಒಟ್ಟು 410 ಕೆಜಿ(189+221)ಎತ್ತಿ ಹಿಡಿದು ವಿಶ್ವ ದಾಖಲೆ ಮುರಿದಿದ್ದಲ್ಲದೆ ಚಿನ್ನದ ಪದಕ ಜಯಿಸಿದ್ದಾರೆ. ಕತರ್ನ ಎಲ್ಬಖ್ ಫೆರೆಸ್ 381 ಕೆಜಿ(166+215 ಕೆಜಿ)ಎತ್ತಿ ಹಿಡಿದು ಬೆಳ್ಳಿ ಪದಕವನ್ನು ಹಾಗೂ ಥಾಯ್ಲೆಂಡ್ನ ಸಂಪ್ರದಿತ್ ಸರಾತ್(380ಕೆಜಿ) ಕಂಚು ಜಯಿಸಿದರು.
Next Story