ಸೆಲ್ಫಿ ವಿದ್ ಸಹಿ ಸಂಗ್ರಹ ಅಭಿಯಾನದ ಅದೃಷ್ಠಶಾಲಿಗಳು
ಉಡುಪಿ, ಆ.28: ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಉಡುಪಿಯ ಬಿಗ್ ಬಜಾರ್ ಹಾಗೂ ಮಣಿಪಾಲದ ಕೆನರಾ ಮಾಲ್ಗಳಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ ಅಭಿಯಾನದ ಪ್ರಯುಕ್ತ ಆಯೋಜಿಸಿದ್ದ ಸೆಲ್ಫಿ ವಿದ್ ಸಹಿ ಸಂಗ್ರಹ ಅದೃಷ್ಠಶಾಲಿ ವಿಜೇತರ ಡ್ರಾವನ್ನು ಮಂಗಳವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರ ಕಚೇರಿಯಲ್ಲಿ ನಡೆಸಲಾಯಿತು.
ಬಿಗ್ ಬಝಾರ್ನಲ್ಲಿ ಭಾಗವಹಿಸಿದ ಐವರು ಅದೃಷ್ಠಶಾಲಿಗಳು ಹಾಗೂ ಕೆನರಾ ಮಾಲ್ನಲ್ಲಿ ಭಾಗವಹಿಸಿದ 10 ಮಂದಿ ಅದೃಷ್ಠಶಾಲಿಗಳಿಗೆ ತಲಾ ರೂ. 1000 ಮೌಲ್ಯದ ಗಿಫ್ಟ್ ವೋಚರ್ಗಳನ್ನು ನೀಡಲಾಗುತ್ತದೆ. ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ವಿಜೇತರ ಡ್ರಾವನ್ನು ನಡೆಸಿಕೊಟ್ಟರು.
ಈ ವೇಳೆ ಡಿಸಿಐಬಿಯ ಸಂಪತ್ ಕುಮಾರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಸಹ ಕಾರ್ಯದರ್ಶಿ ಮೈಕಲ್ ರೊಡ್ರಿಗಸ್, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್, ಸಹಸಂಚಾಲಕಅನೀಶ್ ಡಿಸೋಜ, ಸೆಲ್ಫಿ ವಿದ್ ಸಹಿ ಸಂಗ್ರಹ ಅಭಿಯಾನದ ಪದಾಧಿಕಾರಿಗಳಾದ ಪಲ್ಲವಿ ಸಂತೋಷ್, ಅಶೋಕ್ ಪೂಜಾರಿ, ತೃಪ್ತಿ, ಸೂರಜ್, ಅಂಕಿತ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಯತೀಶ್ ಉಪಸ್ಥಿತರಿದ್ದರು.
ಅದೃಷ್ಟಶಾಲಿ ವಿಜೇತರ ವಿವರ ಇಂತಿದೆ
ಬಿಗ್ ಬಝಾರ್ ವಿಜೇತರು: 170-ವೆರೋನಿಕಾ, 267-ವಿಜಯ್ ಕರ್ಕೇರಾ, 144-ನಾಗೇಶ್ ಪೈ, 59-ಪೂರ್ಣೆಂದ್ರ ಮತ್ತು 58-ನೀಲ್. ಕೆನರಾ ಮಾಲ್ ವಿಜೇತರು: 172-ನಯನ್, 325-ಮುಸ್ತಾಕಿನ್, 490-ಪ್ರವೀಣ್ ಕುಮಾರ್, 497-ಪ್ರಿಯಾಂಕ, 01-ಕುಮಾರಸ್ವಾಮಿ, 74-ಧೀರಜ್, 394- ಅನಂತ್, 256-ನಿಧಿ ಕಲಾನಿ, 132-ಅನನ್ಯಾ, 474-ಕಿರಣ್.
ವಿಜೇತರು ತಮ್ಮ ಬಹುಮಾನಗಳನ್ನು ಸೆ.5ರೊಳಗೆ ನಾಯರ್ಕೆರೆಯಲ್ಲಿರುವ ಉಡುಪಿ ಪ್ರೆಸ್ ಕ್ಲಬ್ ಕಚೇರಿಯಿಂದ ಪಡೆದುಕೊಳ್ಳುಂತೆ ಸಂಘಟಕರ ಪ್ರಕಟಣೆ ತಿಳಿಸಿದೆ.