ಫಲಾಹ್ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ
ಮಂಗಳೂರು, ಆ. 28: ತಲಪಾಡಿಯ ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ನಡೆಯಿತು.
ಮುಖ್ಯ ಚುನಾವಣಾಧಿಕಾರಿಯಾಗಿ ವಿದ್ಯಾರ್ಥಿ ಮುಹಮ್ಮದ್ ಉದೈಫ್, ಸಹಾಯಕ ಚುನಾವಣಾಧಿಕಾರಿಯಾಗಿ ಅಹ್ಮದ್ ಅರ್ಷದ್, ಚುನಾವಣಾ ವೀಕ್ಷಣಾಧಿಕಾರಿ ಯು.ಕೆ. ಸಿನಾನ್, ಸಹಾಯಕ ಅಧಿಕಾರಿಯಾಗಿ ಅಶ್ವಿದ್ ಇಬ್ರಾಹೀಂ ಮತ್ತು ಅಹ್ಮದ್ ಸಮಝ್, ಭದ್ರತಾಧಿಕಾರಿಯಾಗಿ ಮೊಯ್ದಿನ್ ಮುಬಶ್ಶಿರ್ ಕರ್ತವ್ಯ ನಿರ್ವಹಿಸಿದರು.
ಮುಖ್ಯ ಶಿಕ್ಷಕ ಮುಹಮ್ಮದ್ ರಫೀಕ್, ದೈಹಿಕ ಶಿಕ್ಷಕ ಭರತ್, ಚಿತ್ರಕಲಾ ಶಿಕ್ಷಕ ನವೀನ್ ಪ್ರಸಾದ್ ಮೊಂತೆರೊ, ಚುನಾವಣಾ ಆಯೋಗದ ಸದಸ್ಯರಾದ ಸಾಧನಾ ರಾವ್, ವನಿತಾ ಮತ್ತಿತರರು ಸಹಕರಿಸಿದ್ದರು.
Next Story