ಹೊಸಂಗಡಿ: ಎರಡು ದೇವಸ್ಥಾನಗಳಲ್ಲಿ ಕಳ್ಳತನ
ಅಮಾಸೆಬೈಲು, ಆ.28: ಹೊಸಂಗಡಿ ಗ್ರಾಮದ ಎರಡು ದೇವಸ್ಥಾನಗಳಿಗೆ ಆ.26ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಹೊಸಂಗಡಿ ಗ್ರಾಮದ ಕೆರೆಕಟ್ಟೆ ಶಾಂತೇಶ್ವರ ದೇವಸ್ದಾನದ ಗರ್ಭಗುಡಿ ಹಾಗೂ ಒಳಗಿನ ಬಾಗಿಲಿಗೆ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು ದೇವರ ಮುಖಕ್ಕೆ ಹಾಕಿರುವ ಬೆಳ್ಳಿಯ ಅರ್ಧ ಮುಖವಾಡ ಮತ್ತು ಗರ್ಭಗುಡಿಯಲ್ಲಿ ಇಟ್ಟಿದ್ದ ಹಳೆಯ ಅರ್ಧ ಬೆಳ್ಳಿಯ ಮುಖವಾಡಗಳನ್ನು ಕಳವು ಮಾಡಿದ್ದು, ಇದರ ಮೌಲ್ಯ 9000 ರೂ. ಎಂದು ಅಂದಾಜಿಸಲಾಗಿದೆ.
ನಂತರ ಕಳ್ಳರು ಹೊಸಂಗಡಿ ಗ್ರಾಮದ ಹುಣ್ಸೆಡಿ ಶ್ರೀವಿರೂಪಾಕ್ಷ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳನುಗ್ಗಿ ದೇವರ ಮುಖಕ್ಕೆ ಹಾಕಿರುವ ಕಣ್ಣಿನ ದೃಷ್ಟಿ ಮತ್ತು ಕಾಣಿಕೆ ಡಬ್ಬವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ 8,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story