ಉಡುಪಿ: ಆಶಾಗೆ ಪಿಎಚ್ಡಿ ಪದವಿ ಪ್ರದಾನ
ಉಡುಪಿ, ಆ.28: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾ ಪಕಿ ಆಶಾ ಸಿ.ಎಸ್. ಸುರತ್ಕಲ್ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ (ಎನ್ಐಟಿಕೆ) ಸಹಾಯಕ ಪ್ರಾಧ್ಯಾಪಕ ಡಾ.ಎ.ವಿ.ನರಸಿಂಹಧನರವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಬಣ್ಣದ ಮತ್ತು ಅತಿಗೆಂಪು ವೀಡಿಯೋ ಚಿತ್ರಣದಲ್ಲಿ ವಸ್ತುಗಳ ಜಾಡೀಕರಣ’ ಎಂಬ ಸಂಶೋಧನಾ ಪ್ರಬಂಧಕ್ಕೆ ಎನ್ಐ ಟಿಕೆಯು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಳ್ತಂಗಡಿ ಮೂಲದ ಇವರು ಪತ್ರಕರ್ತ ಲಕ್ಷ್ಮೀನರಸಿಂಹ ಶಾಸ್ತ್ರಿ ಅವರ ಪತ್ನಿ.
Next Story