ಪಾರ್ಕಿಂಗ್ ಮಾಡಿದ್ದ ಸ್ಕೂಟರ್ ಕಳವು
ಮಂಗಳೂರು, ಆ. 29: ಫ್ಲಾಟ್ ಕೆಳಗೆ ಪಾರ್ಕಿಂಗ್ ಮಾಡಿದ್ದ ಸ್ಕೂಟರ್ ಕಳವಾದ ಘಟನೆ ನಗರದ ಜೋಡುಮಠದ ಬಳಿ ನಡೆದಿದೆ.
ಸ್ಥಳೀಯ ನಿವಾಸಿ ಗಿರಿಧರ ಗಟ್ಟಿ (48) ಎಂಬವರಿಗೆ ಸೇರಿದ ಸ್ಕೂಟರ್ ಕಳವಾಗಿರುವುದು. ಆ.25ರಂದು ರಾತ್ರಿ ಗಿರಿಧರ ತನ್ನ ಸ್ಕೂಟರ್ನ್ನು ಯುನೈಟೆಡ್ ಪ್ಲಾಜಾ ಫ್ಲಾಟ್ನ ಕೆಳಗಡೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ತನ್ನ ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ 10:30ಕ್ಕೆ ಸ್ಕೂಟರ್ ಇಟ್ಟಲ್ಲಿಗೆ ಬಂದಾಗ ಸ್ಕೂಟರ್ ಕಳವಾಗಿರುವುದು ಬೆಳಕಿಗೆ ಬಂದಿದೆ.
ಅಕ್ಕಪಕ್ಕದಲ್ಲಿ ಹುಡುಕಾಡಿ, ತನ್ನ ಹೆಂಡತಿ ಮತ್ತು ಫ್ಲಾಟ್ನ ರವಿ ಜಿ.ಧಾರನ್ ಅವರಲ್ಲಿ ವಿಷಯ ತಿಳಿಸಿದ್ದು, ಸ್ಕೂಟರ್ ಸಿಗಬಹುದೆಂಬ ನಿರೀಕ್ಷೆಯಿಂದ ಮಂಗಳೂರು ನಗರದ ಎಲ್ಲ ಕಡೆಗಳಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ದೊರೆತಿಲ್ಲ. ಈ ಕುರಿತು ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
Next Story