ಉಡುಪಿ ಕೊಡವೂರಿನಲ್ಲಿ ಕೈಕೊಟ್ಟ ಮತಯಂತ್ರ: ಒಂದೂವರೆ ಗಂಟೆ ಮತದಾನ ಸ್ಥಗಿತ
ಉಡುಪಿ, ಆ. 31: ಉಡುಪಿ ನಗರಸಭೆ ಚುನಾವಣೆಗೆ ಸಂಬಂಧಿಸಿ ಕೊಡವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರ ದಲ್ಲಿ ಇಂದು ಬೆಳಗ್ಗೆ ಮತಯಂತ್ರ ಕೈಕೊಟ್ಟ ಪರಿಣಾಮ ಸುಮಾರು ಒಂದೂವರೆ ಗಂಟೆಗಳ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಇದು ಜನಾಕ್ರೋಶಕ್ಕೆ ಕಾರಣ ವಾಯಿತು.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಸುಮಾರು 116 ಮಂದಿ ಮತದಾನ ಮಾಡಿದ್ದರು. ಬೆಳಗ್ಗೆ 9.15ರ ಸುಮಾರಿಗೆ 117 ಮತದಾನ ಮಾಡುವಾಗ ಮತ ಯಂತ್ರದ ಬಟನ್ ಕೆಲಸ ಮಾಡದೆ ಮತ ಚಲಾವಣೆ ಯಾಗಲಿಲ್ಲ. ಇದನ್ನು ಗಮನಿಸಿದ ಮತದಾರರು ಹಾಗೂ ಮತಗಟ್ಟೆಯ ಅಧಿ ಕಾರಿಗಳು ಮತಯಂತ್ರವನ್ನು ದುರಸ್ತಿ ಮಾಡಲು ಮುಂದಾದದರು. ಆದರೆ ಅದು ಸಾಧ್ಯವಾಗಲಿಲ್ಲ.
ಇದರಿಂದ ಕೆಲಸಕ್ಕೆ ಹೋಗಲು ಬೆಳಗ್ಗೆ ಬೇಗನೆ ಮತದಾನ ಕೇಂದ್ರಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ತೊಂದರೆ ಅನುಭವಿಸು ವಂತಾಯಿತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂಜೆ ಮತದಾನಕ್ಕೆ ಒಂದು ಗಂಟೆ ಹೆಚ್ಚುವರಿ ಸಮಯ ನೀಡುವಂತೆ ಒತ್ತಾಯಿಸಲಾಯಿತು. ಹೆಚ್ಚಿನ ಮತದಾರರು ಮತದಾನ ಮಾಡದೆಯೇ ಹಿಂತಿರುಗಿದರು.
ಈ ಸಮಸ್ಯೆಯಿಂದ ಮತದಾನ ಕೇಂದ್ರದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ಹಾಗೂ ಮಲ್ಪೆ ಪೊಲೀಸರು ಮತದಾರರನ್ನು ಸಮಧಾನ ಪಡಿಸಿದರು. ಆದರೆ ಹೆಚ್ಚುವರಿ ಸಮಯ ನೀಡಲು ಅಧಿಕಾರಿಗಳು ನಿರಾಕರಿಸಿದರು. ಸುಮಾರು ಒಂದೂವರೆ ಗಂಟೆಗಳ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಬಳಿಕ ಹೊಸ ಮತಯಂತ್ರವನ್ನು ಆಳವಡಿಸಲಾಯಿತು. ಇದೀಗ ಮತದಾನ ಪ್ರಕ್ರಿಯೆ ಮುಂದುವರೆದಿದೆ.
ಅದೇ ರೀತಿ ಕರಂಬಳ್ಳಿಯಲ್ಲಿಯೂ ಮತಯಂತ್ರ ಕೈಕೊಟ್ಟ ಬಗ್ಗೆ ವರದಿಯಾಗಿದೆ ಇದರಿಂದ ಮತದಾನವು ಸುಮಾರು ಅರ್ಧ ಗಂಟೆಗಳ ಕಾಲ ವಿಳಂಬ ವಾಯಿತು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.