ಕೊಡಿಬೆಟ್ಟು: ಬಾವಿ ಕುಸಿದು ಲಕ್ಷಾಂತರ ರೂ. ನಷ್ಟ
ಹಿರಿಯಡ್ಕ, ಆ.31: ಕೊಡಿಬೆಟ್ಟು ಗ್ರಾಪಂ ವ್ಯಾಪ್ತಿಯ ಅಂಜಾರು ಗ್ರಾಮದ ಗೋಲಿದಡಿ ಎಂಬಲ್ಲಿ ಉಮೇಶ್ ಶೆಟ್ಟಿ ಎಂಬವರ ಮನೆಯ ಬಾವಿ ಸಂಪೂರ್ಣ ಕುಸಿದು ಸುಮಾರು 3 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
ಇದೇ ವೇಳೆ ಬಾವಿ ಪಕ್ಕದಲ್ಲಿರುವ ಪಂಪ್ ಶೆಡ್ಡಿನ ಚಾವಣಿ ಕುಸಿದು ಬಾವಿ ಯೊಳಗೆ ಬಿದ್ದಿದೆ. ಕುಸಿಯುವ ರಭಸಕ್ಕೆ ಮನೆಯ ಗೋಡೆಯಲ್ಲಿಯೂ ಬಿರುಕು ಕಂಡುಬಂದಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಸ್ಥಳ ಭೇಟಿ ನೀಡಿ ಮಳೆ ಹಾನಿಯಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಉಮೇಶ್ ಶೆಟ್ಟಿ ಒತ್ತಾಯಿಸಿದ್ದಾರೆ.
Next Story