ಹೊಂಡ ತಪ್ಪಿಸಲು ಹೋಗಿ ಅಪಘಾತಕ್ಕೀಡಾದ ಮುಲ್ಕಿ ಠಾಣೆ ವಾಹನ
ಮುಲ್ಕಿ, ಆ. 31: ಇಲ್ಲಿಗೆ ಸಮೀಪದ ಬಪ್ಪನಾಡು ಬೀಚ್ ರಸ್ತೆಯಲ್ಲಿ ಗಸ್ತು ತಿರುಗಲೆಂದು ಹೊರಟಿದ್ದ ಮುಲ್ಕಿ ಪೊಲೀಸ್ ಠಾಣೆಯ ಕಾರು ಮರಕ್ಕೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿರುವವರು ಅಪಾಯದಿಂದ ಪಾರಾಗಿದ್ದಾರೆ.
ಮುಲ್ಕಿ ಠಾಣೆಯ ಗಸ್ತು ತಿರುಗುವ ಕಾರು ಎಂದಿನಂತೆ ಗಸ್ತು ತಿರುಗಲು ಬಪ್ಪನಾಡು ಬೀಚ್ ರಸ್ತೆಗೆ ಹೊರಟಿದ್ದು ರಸ್ತೆಯಲ್ಲಿ ಹೊಂಡ ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದಿರುವುದಾಗಿ ಹೇಳಲಾಗಿದೆ.
ಅಪಘಾತದಿಂದ ಕಾರಿನ ಎದುರು ಭಾಗ ಸ್ವಲ್ಪ ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
Next Story