ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಮಂಗಳೂರಿನಿಂದ ಗಿರಿಧರ್ ಸಾಲಿಯಾನ್ ಸ್ಪರ್ಧೆ
ಮಂಗಳೂರು, ಸೆ. 1: ಸ್ಪೈನ್ನ ಮಲಗದಲ್ಲಿ ಸೆ. 4ರಿಂದ 16ರವರೆಗೆ ನಡೆಯುವ 23ನೇ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2018ರ ಕ್ರೀಡಾಕೂಟದ ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಗಿರಿಧರ್ ಸಾಲಿಯಾನ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇವರು ಮಂಗಳೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಶಿಯೇಶನ್ನ ಸದಸ್ಯರು, ಕದ್ರಿಹಿಲ್ಸ್ ಸರಕಾರಿ ಐಟಿಐಯ ಪ್ರಾಂಶುಪಾಲರು/ಉಪನಿರ್ದೇಶಕರು ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಪ್ರಭಾರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story