ಪರಾಮರ್ಶನ ವಿಧಾನಗಳು
ಬೆಳೆಯುವ ಪೈರು ►ಅಧ್ಯಯನ ಮತ್ತು ಅರಿವು
ಶಿಕ್ಷಣ ಹೂರಣ
ಭಾಗ-7
ಕಲಿಸುವಿಕೆಯಲ್ಲಿ ತಮ್ಮ ಗುರಿ ಸಾತವಾಗದೇ ಹೋದಾಗ ಮಕ್ಕಳು ಅದನ್ನು ಏಕೆ ಸಾಸುತ್ತಿಲ್ಲ ಎಂಬುದರ ಬಗ್ಗೆಯೇ ಬಹಳಷ್ಟು ವ್ಯಾಖ್ಯಾನಗಳು ಮತ್ತು ಚಿಂತನೆಗಳು ನಡೆಯುತ್ತವೆ. ಅವು ಮಕ್ಕಳ ಸ್ಥಾನದಿಂದಲೇ ಯೋಚಿಸಲಾಗುತ್ತದೆ. ಆದರೆ, ಮಕ್ಕಳನ್ನು ತಾವೇಕೆ ತಲುಪುತ್ತಿಲ್ಲ ಎಂದು ಶಿಕ್ಷಕರ ಸ್ಥಾನದಿಂದ ಯೋಚನೆ ಮಾಡಬೇಕಾಗಿರುವುದು ಬಹಳ ಮುಖ್ಯವಾದ ಕೆಲಸ. ಇದೇ ಪರಾಮರ್ಶನೆಯ ಮುಖ್ಯಭಾಗ.
ಸಿಂಪಲ್ ಲೀವಿಂಗ್ ಹೈ ಥಿಂಕಿಂಗ್ ಅಂದರೆ, ಸರಳವಾಗಿ ಬದುಕುವುದು ಮತ್ತು ಉನ್ನತವಾಗಿ ಆಲೋಚಿಸುವುದು ಎಂಬ ವಾಕ್ಯವನ್ನು ತಮ್ಮ ಧ್ಯೇಯವನ್ನಾಗಿಸಿಕೊಳ್ಳುವುದರಲ್ಲಿ ಹಲವರಿಗೆ ಬಹಳ ಅಚ್ಚುಮೆಚ್ಚು. ಹಾಗೂ ಅದನ್ನು ಒಂದು ಮೌಲ್ಯವನ್ನಾಗಿ ಪರಿಗಣಿಸಲಾಗುವುದು. ಆದರೆ ಶಾಲೆಗಳಲ್ಲಿ ಮಕ್ಕಳನ್ನು ತರಬೇತಿಗೊಳಿಸುವಾಗ, ಶಿಕ್ಷಕರು ಅಥವಾ ತರಬೇತುದಾರರು ತಮ್ಮ ಆಲೋಚನಾ ಬಗೆಯನ್ನೇ ಸರಳವಾಗಿರಿಸಿ ಕೊಂಡಿರಬೇಕು. ಏಕೆಂದರೆ, ಮಕ್ಕಳದು ಆಲೋಚನೆಗಳೇ ಅಲ್ಲದ ಆಲೋಚನೆಗಳು. ದೊಡ್ಡವರ ದೃಷ್ಟಿಯಲ್ಲಿ ಯಾವುದನ್ನು ಚಿಂತನೆಗಳು ಎಂದು ಹೇಳುತ್ತೇವೆಯೋ ಅಂತವಾವೂ ಅಲ್ಲದ ಚಿಂತನೆಗಳು. ಅವರು ಯಾವಾಗಲೂ ಕ್ರಿಯಾಶೀಲರಾಗಿಯೂ ಮತ್ತು ಸೃಜನಶೀಲರಾಗಿಯೂ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿರುತ್ತಾರೆ. ಅವರನ್ನು ಹೀಗೆ ಮಾಡಿ, ಹೀಗೆಯೇ ಮಾಡಬೇಕು ಎನ್ನುವ ಬದಲು, ಹೇಗೆ ಮಾಡುತ್ತೀರಿ? ಹೇಗೆಲ್ಲಾ ಮಾಡಬಹುದು? ಎಂಬುದರ ಮುಖಾಂತರ ನಾವು ಗಮನಿಸುತ್ತಿರಬೇಕು. ನಮ್ಮ ಮುಖ್ಯವಾದ ಕೆಲಸವೇನೆಂದರೆ, ಅವರ ಗಮನಕ್ಕೆ ಕೆಲವು ವಿಷಯಗಳನ್ನು ತರುವುದಷ್ಟೇ ಆಗಿರುವುದು.
ಯಾವುದೇ ವಿಷಯ ಅಥವಾ ಕಲೆಗಳ ಬಗ್ಗೆ ರಸಗ್ರಹಣ ಶಿಬಿರಗಳನ್ನು ಏರ್ಪಡಿಸಿದರೂ ಕೂಡ ಅದರಲ್ಲಿ ನಾವು ಮಾಡಬೇಕಾಗಿರುವುದು ಏನೆಂದರೆ?
1.ತಾವು ಅವರಿಗೆ ಪರಿಚಯಿಸಬೇಕಾಗಿರುವ ವಿಷಯವನ್ನು ಮುಂದಿಡುವುದು.
2.ಯಾವುದೇ ವಿಷಯವನ್ನು ಅವರ ಮುಂದಿಟ್ಟರೂ ಅದು ಬಹಳ ಚಿಕ್ಕದಾಗಿರ ಬೇಕು. ಅಂದರೆ, ಒಂದು ನಿಮಿಷ ಅಥವಾ ಒಂದೂವರೆ ನಿಮಿಷದ ಅವಯಷ್ಟಾಗಿರಬೇಕು.
3.ವಿಷಯವನ್ನು ಅವರ ಗಮನಕ್ಕೆ ತಂದ ಮೇಲೆ ಮಿಕ್ಕೆಲ್ಲಾ ವಿಷಯಗಳೂ ಮಕ್ಕಳ ಭಾಗವಹಿಸುವಿಕೆಯಲ್ಲಿಯೇ ಇರಬೇಕು.
4.ಪ್ರಸ್ತುತಪಡಿಸಿದ ವಿಷಯಗಳನ್ನು ಹಲವು ಸಂಗತಿಗಳನ್ನಾಗಿ ಅಥವಾ ಭಾಗಗಳನ್ನಾಗಿ ಮಾಡಿದ್ದು ಅದನ್ನು ಒಂದೊಂದಾಗಿ ಮಕ್ಕಳಿಗೆ ಪುನರಾವರ್ತನೆಯಾಗುವಂತೆ ಮರು ಪ್ರಸ್ತಾವನೆ ಮಾಡಬೇಕು.
5.ಮಕ್ಕಳು ಯಾವ ಪರಿಕಲ್ಪನೆಗಳನ್ನು ಆ ವಿಷಯಗಳನ್ನು ನೋಡುವರು ಎಂದು ತಿಳಿಯಬೇಕು.
6.ಒಂದು ಮಗುವಿನ ಭಾಗವಹಿಸುವಿಕೆ ಮತ್ತೊಂದು ಮಗುವಿನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದಾಗಿ ಎಲ್ಲಾ ಮಕ್ಕಳೂ ಒಂದಲ್ಲಾ ಒಂದು ರೀತಿಯಲ್ಲಿ ಕ್ರಿಯಾಶೀಲವಾಗಿಯೂ ಮತ್ತು ಸೃಜನಶೀಲವಾಗಿಯೂ ಇರುತ್ತಾರೆ.
7.ಹಾಗೊಂದು ವೇಳೆ ಯಾವುದೇ ಒಂದು ಮಗುವು ಅಥವಾ ಕೆಲವು ಮಕ್ಕಳು ಭಾಗವಹಿಸುತ್ತಲೇ ಇಲ್ಲವೆಂದರೆ ಆ ಮಗುವಿನಲ್ಲಿ ಯಾವುದಾದರೂ ಮಾನಸಿಕವಾದಂತಹ ಅಥವಾ ಭಾವನಾತ್ಮಕವಾದಂತಹ ಸಮಸ್ಯೆಗಳೇನಾದರೂ ಇರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಆ ಮಗುವನ್ನು ವ್ಯಕ್ತಿಗತವಾಗಿ ಗಮನಿಸುವ ಅಗತ್ಯವಿರುತ್ತದೆ.
8.ಶಾಲೆಯಲ್ಲಿ ಮಕ್ಕಳ ಗುಂಪುಗಳನ್ನು ನಿಭಾಯಿಸುವಾಗಲೂ ಕೂಡ ಎದುರಿಸುವಂತಹ ಸಮಸ್ಯೆಗಳನ್ನು ಗುರುತುಹಾಕಿಕೊಳ್ಳಬೇಕು. ಆ ಸಮಸ್ಯೆ ಗಳೂ ಕೂಡಾ ಕೆಲವೊಮ್ಮೆ ಮಗುವಿನ ವ್ಯಕ್ತಿಗತ ಸಮಸ್ಯೆಯಾಗಿರುತ್ತದೆ, ಕೆಲವೊಮ್ಮೆ ಸಮೂಹದ ಸಮಸ್ಯೆಯಾಗಿರುತ್ತದೆ. ವ್ಯಕ್ತಿಗತ ಮಕ್ಕಳ ಸಮಸ್ಯೆಗಳು ಎಂದರೆ ಒಬ್ಬೊಬ್ಬರದು ಒಂದೊಂದಾಗಿರುತ್ತದೆ. ಅದು ಅವರ ಆರೋಗ್ಯದ, ಕುಟುಂಬದ, ಪರಿಸರದ, ಸಮುದಾಯದ; ಹೀಗೆ ಯಾವುದೋ ಒಂದರ ಪ್ರತಿಲನ ಅವರಲ್ಲಿಕಾಣುತ್ತಿರುತ್ತದೆ.
ಸಮೂಹದ ಸಮಸ್ಯೆಗಳು ಎಂದರೆ ಸಾಮಾನ್ಯವಾಗಿ ಶಾಲೆ ಅಥವಾ ಪರಿಸರದ ದುರ್ಬಲ ಕೊಂಡಿಯ ಅಥವಾ ವ್ಯವಸ್ಥೆಯ ವೈಲ್ಯದ ಪ್ರತಿಲನವಾಗಿರುತ್ತದೆ. ಹಾಗಾಗಿ ಸಮಸ್ಯೆಯನ್ನು ಗುರುತಿಸುವುದು ಶಿಕ್ಷಕರ ಅಥವಾ ತರಬೇತುದಾರರ ಗುರುತರ ಜವಾಬ್ದಾರಿಯೇ ಆಗಿರುತ್ತದೆ.
► ಪರಾಮರ್ಶನ ಎಂದರೇನು?
ಶಿಕ್ಷಕರು ಮತ್ತು ತರಬೇತುದಾರರು ತಮ್ಮನ್ನು ತಾವು ಆಗಿಂದಾಗ್ಗೆ ಪರಾಮರ್ಶನ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ತಮ್ಮ ನಿರ್ದಿಷ್ಟಗುರಿಯನ್ನು ತಾವು ಸಾಸದೇ ಹೋದಾಗ ತಮ್ಮ ವಿಧಾನವು ಎಲ್ಲಿ ತಪ್ಪಿರಬಹುದೆಂದು ಗಮನಿಸಬೇಕು. ಇದಕ್ಕೆ ತದ್ವಿರುದ್ದವಾಗಿ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ನಡೆಯುತ್ತಿರುತ್ತವೆ. ಕಲಿಸುವಿಕೆಯಲ್ಲಿ ತಮ್ಮ ಗುರಿ ಸಾತವಾಗದೇ ಹೋದಾಗ ಮಕ್ಕಳು ಅದನ್ನು ಏಕೆ ಸಾಸುತ್ತಿಲ್ಲ ಎಂಬುದರ ಬಗ್ಗೆಯೇ ಬಹಳಷ್ಟು ವ್ಯಾಖ್ಯಾನಗಳು ಮತ್ತು ಚಿಂತನೆಗಳು ನಡೆಯುತ್ತವೆ. ಅವು ಮಕ್ಕಳ ಸ್ಥಾನದಿಂದಲೇ ಯೋಚಿಸಲಾಗುತ್ತದೆ. ಆದರೆ, ಮಕ್ಕಳನ್ನು ತಾವೇಕೆ ತಲುಪುತ್ತಿಲ್ಲ ಎಂದು ಶಿಕ್ಷಕರರ ಸ್ಥಾನದಿಂದ ಯೋಚನೆ ಮಾಡಬೇಕಾಗಿರುವುದು ಬಹಳ ಮುಖ್ಯವಾದ ಕೆಲಸ. ಇದೇ ಪರಾಮರ್ಶನೆಯ ಮುಖ್ಯಭಾಗ.
ತಮ್ಮನ್ನು ತಾವು ಪರಾಮರ್ಶನೆಗೆ ಒಳಪಡಿಸಿಕೊಳ್ಳುವ ಬಹುಮುಖ್ಯವಾದ ಅಗತ್ಯವೇನೆಂದರೆ,
1.ತರಬೇತಿಯ ಸಮಯದಲ್ಲಿ ಮಗುವಿಗೆ ಉಂಟಾಗುವ ವ್ಯಕ್ತಿಗತ ಮತ್ತು ಸಾಮೂಹಿಕ ಪ್ರಭಾವಗಳು ಶಾಶ್ವತ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿರುವುದು. ಅದು ಭಾವನಾತ್ಮಕ ವಿಷಯವೂ ಮತ್ತು ಮೆದುಳಿನ ಬೆಳವಣಿಗೆಯ ವಿಷಯವೂ ಆಗಿರುತ್ತದೆ.
2.ಕಲಿತದಷ್ಟನ್ನೇ ಒಪ್ಪಿಸುವರೋ, ಕಲಿಸಿದ್ದನ್ನು ಮತ್ತೊಂದು ರೀತಿಯಲ್ಲಿ ವಿಸ್ತರಿಸಿ ಹೇಳುವ ಸಾಮರ್ಥ್ಯವಿರುವುದೋ. ಕಲಿಸಿದಷ್ಟನ್ನೇ ಒಪ್ಪಿಸುತ್ತಿದ್ದಾರೆ ಎಂದರೆ ಕಲಿಕೆಯ ವಿಸ್ತರಣೆ ಮತ್ತು ವಿಕಾಸವಾಗುತ್ತಿಲ್ಲ ಎಂದೇ ಅರ್ಥ. ಆದರೆ ಸಮಸ್ಯೆ ಎಂದರೆ ಶಿಕ್ಷಕರು ಮತ್ತು ತರಬೇತುದಾರರಲ್ಲಿ ಬಹಳಷ್ಟು ಜನಕ್ಕೆ ತಾವು ಕಲಿಸಿದ್ದನ್ನು ಒಪ್ಪಿಸಿದರಷ್ಟೇ ಸಾಕಾಗುತ್ತದೆ. ಅದಕ್ಕಿಂತ ಹೆಚ್ಚಿಗೆ ಮಾಡಿದರೆ ಅದನ್ನು ಅಕಪ್ರಸಂಗತನವೆಂದು ಪರಿಗಣಿಸಲಾಗುತ್ತದೆ.
3.ಬಹಳಷ್ಟು ಜನ ಮಕ್ಕಳು ತಮ್ಮ ಪಠ್ಯದ ಪ್ರಶ್ನೆಗಳಿಗೆ ಹೊರತಾಗಿ ಹೊರಗಿನ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ.
4.ಶಾಲೆಯ ಪಠ್ಯದ ವಿಷಯಗಳಿಗೇ ಹೊಂದಿಕೆಯಾಗಿರುವಂತಹ ವಿಷಯಗಳು ಹೊರಗಿನ ಪರಿಸರ ಮತ್ತು ಸನ್ನಿವೇಶಗಳಲ್ಲಿ ಗಮನಿಸಿದಾಗ ಅವುಗಳಿಗೆ ಸೂಕ್ತವಾದಂತಹ ಪ್ರತಿಕ್ರಿಯೆಗಳನ್ನು ಮಕ್ಕಳಿಗೆ ಕೊಡಲು ಸಾಧ್ಯವಾಗುವುದಿಲ್ಲ. ಅದು ಏಕೆ ಎಂಬುದನ್ನು ತಿಳಿದುಕೊಳ್ಳಬೇಕು.
5.ಪ್ರಾಥಮಿಕ ಮತ್ತು ಅದಕ್ಕೂ ಹಿಂದಿನ ತರಗತಿಗಳಲ್ಲಿ ಸರಿಯಾದ ಶೈಕ್ಷಣಿಕ ಮತ್ತು ಪರಿಣಾಮಕಾರಿಯಾದಂತಹ ಪರಿಸರಗಳಲ್ಲಿ ತರಬೇತಿಯನ್ನು ಹೊಂದಿದರೆ ಮುಂದಿನ ಶಿಕ್ಷಣದ ಹಂತಗಳು ಪರಿಣಾಮಕಾರಿಯಾಗಿರುತ್ತವೆ.
6.ಮಕ್ಕಳ ಆಲೋಚನಾ ವರ್ತನೆಗಳು, ಸಾಮಾಜಿಕವಾಗಿ ಪ್ರಭಾವ ಬೀರುವಿಕೆಗಳು; ಎಲ್ಲವೂ ಕೂಡಾ ಶಿಕ್ಷಕ ಅಥವಾ ತರಬೇತುದಾರರ ಪರಾಮರ್ಶನ ಮನಸ್ಥಿತಿಗಳ ಮೇಲೆ ಅವಲಂಬಿತವಾಗುತ್ತವೆ.
7.ಶಿಕ್ಷಕರು ಮತ್ತು ತರಬೇತುದಾರರು ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಗಳಿಗೆ ಅನುಸಾರವಾಗಿ ತಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ರೂಪಿಸಿಕೊಳ್ಳುವುದು.
8.ಪ್ರತಿಯೊಂದು ಮಗುವಿನ ಸೂಕ್ಷ್ಮ ಮತ್ತು ಸ್ಥೂಲ ವಿಷಯಗಳನ್ನು ಪ್ರಾರಂಭದಿಂದಲೂ ದಾಖಲಿಸುವುದರಿಂದ ಮುಂದಿನ ಹೊಸ ಶಿಕ್ಷಕರು ಮತ್ತು ತರಬೇತುದಾರರು ಮಕ್ಕಳನ್ನು ಮತ್ತೆ ಮೊದಲಿನಿಂದ ತಿಳಿದುಕೊಳ್ಳಲು ಹೆಣಗಾಡುವುದನ್ನು ತಪ್ಪಿಸುತ್ತದೆ.
9.ಕ್ರಿಯಾಶೀಲ, ಸೃಜನಶೀಲ ಚಿಂತನೆಗಳು ಹುಟ್ಟಲು ಸಾಧ್ಯವಾಗುವುದು ವಿಮರ್ಶಾತ್ಮಕವಾಗಿ ವಿಷಯಗಳನ್ನು ನೋಡುವುದರಿಂದ. ಆದ್ದರಿಂದ ವಿಮರ್ಶಾತ್ಮಕವಾಗಿ ಮಕ್ಕಳು ವಿಷಯಗಳನ್ನು ಮಾತ್ರವಲ್ಲದೇ ತರಬೇತುದಾರರೂ ಮತ್ತು ಶಿಕ್ಷಕರೂ ತಮ್ಮದೇ ಆದ ಕಲಿಕೆಯ ಪದ್ಧತಿಯನ್ನು ಮಕ್ಕಳ ಮುಖಾಂತರವೇ ವಿಮರ್ಶೆಗೆ ಒಳಪಡಿಸಬೇಕು.
10.ಮಕ್ಕಳು ಮಾಡುವ ವಿಮರ್ಶೆಗೆ ತೆರೆದುಕೊಳ್ಳುವ ಯಾವುದೇ ಶಿಕ್ಷಕರು ಅಥವಾ ತರಬೇತುದಾರರು ಯಶಸ್ವಿಯಾಗಿ ತಮ್ಮ ಕಲಿಕೆಯ ಪ್ರಕ್ರಿಯೆಯನ್ನು ಸಲಗೊಳಿಸಿಕೊಳ್ಳುತ್ತಾರೆ.
ಯಾವುದೇ ಶಿಕ್ಷಕರು ಅಥವಾ ತರಬೇತುದಾರರು ತಮ್ಮ ಸಾಮರ್ಥ್ಯವನ್ನು ಅದೆಷ್ಟೇ ನೆಚ್ಚಿಕೊಂಡಿದ್ದರೂ ಅದನ್ನು ಮಕ್ಕಳ ಅನುಭವಕ್ಕೆ ದಕ್ಕುವ ದಿಕ್ಕಿನಲ್ಲಿ ತಮ್ಮನ್ನು ತಾವು ಪರಾಮರ್ಶನೆ ಮಾಡಿಕೊಳ್ಳದಿದ್ದರೆ ಅದು ವ್ಯರ್ಥವೇ ಸರಿ. ಹಾಗಾಗಿಯೇ ಪ್ರತಿಯೊಬ್ಬ ಶಿಕ್ಷಕರು ಕೂಡಾ ಪ್ರಾಮಾಣಿಕವಾಗಿ ಮತ್ತು ನಿರಹಂಕಾರವಾಗಿ ತನ್ನ ಮೌಲ್ಯಮಾಪನವನ್ನು ಮಕ್ಕಳ ದೃಷ್ಟಿಯಿಂದ ಮಾಡಿಕೊಳ್ಳಬೇಕು. ಮಕ್ಕಳು ಎಷ್ಟರಮಟ್ಟಿಗೆ ಆಯಾ ಶಿಕ್ಷಕರನ್ನು ಗ್ರಹಿಸುತ್ತಾರೆ, ಅರ್ಥೈಸಿಕೊಳ್ಳುತ್ತಾರೆ ಮತ್ತು ಪ್ರಶಂಸಿಸುತ್ತಾರೆ ಎಂಬುದರ ಮೇಲೆ ಆ ಶಿಕ್ಷಕರ ಯಶಸ್ಸು ಮತ್ತು ಅಪಯಶಸ್ಸುಗಳು ನಿರ್ಧಾರವಾಗುತ್ತದೆ. ಈ ಪರಾಮರ್ಶೆಯೂ ಕೂಡಾ ಯಾರೋ ಒಬ್ಬರು ಮಾಡುವುದು ಒಂದು ಹಂತಕ್ಕೆ ಶಿಕ್ಷಕರನ್ನು ಎಚ್ಚರಿಸಬಹುದೇ ಹೊರತು, ಅವರನ್ನು ಸರಿಪಡಿಸಲಾಗುವುದಿಲ್ಲ. ಶಿಕ್ಷಕ ಮತ್ತು ತರಬೇತುದಾರರೇ ತಮ್ಮನ್ನು ತಾವು ನೋಡಿಕೊಳ್ಳುವಷ್ಟು ಅಥವಾ ಪರಾಮರ್ಶನೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು. ಇದರಿಂದಾಗಿ ಮಕ್ಕಳಿಗೆ ತಾವೇನು ಶಿಕ್ಷಣ ನೀಡಬೇಕು, ನೀಡುತ್ತಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.
ಶಿಕ್ಷಕರು ಮತ್ತು ತರಬೇತುದಾರರು ತಮ್ಮನ್ನು ತಾವು ಪರಾಮರ್ಶಿಸಿಕೊಳ್ಳುವುದು ಮಕ್ಕಳ ಗಮನಕ್ಕೆ ಬಂದರೆ ಅದಕ್ಕಿಂತ ಉತ್ತಮ ಮಾದರಿ ಇನ್ನೊಂದಿಲ್ಲ. ಮಕ್ಕಳಿಗೂ ಕೂಡಾ ತಮ್ಮನ್ನು ತಾವು ವಿಮರ್ಶಿಸಿಕೊಳ್ಳುವ, ತಮ್ಮ ನ್ಯೂನತೆ ಗಳನ್ನು ಗುರುತಿಸಿಕೊಳ್ಳುವ, ಅವನ್ನು ಸರಿಪಡಿಸಿಕೊಳ್ಳಲು ಯತ್ನಿಸುವ ರೂಢಿಯನ್ನು ಬೆಳೆಸಿದಂತಾಗುತ್ತದೆ. ಅಲ್ಲದೇ, ತಾವೂ ಕೂಡ ಕಲಿಕೆಯಲ್ಲಿ ಪ್ರಾಮಾಣಿಕವಾಗಿಯೂ ಮತ್ತು ನಿರಹಂಕಾರವಾಗಿಯೂ ಇರಲು ಕಲಿಯುತ್ತಾರೆ. ಎಲ್ಲಿ ಪ್ರಾಮಾಣಿಕತೆ ಮತ್ತು ನಿರಹಂಕಾರವಿರುತ್ತದೆಯೋ ಅಲ್ಲಿ ಕಲಿಕೆ ಸಿದ್ದಿಸಿತು ಎಂದೇ ಅರ್ಥ.