ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ದಾಖಲೆ ಪರಿಶೀಲನೆ
ಉಡುಪಿ, ಸೆ.1: 2017-18ನೇ ಸಾಲಿನ ಸರಕಾರಿ ಪದವೀರಪ್ರಾಥಮಿಕಶಾಲಾಶಿಕ್ಷಕರನೇಮಕಾತಿಗೆಸಂಬಂಧಿಸಿದಂತೆರ್ಸ್ಪಾತ್ಮಕ ಪರೀಕ್ಷೆ ಬರೆದು ಅರ್ಹರಾದ ಅ್ಯರ್ಥಿಗಳ 1:3 ಅನುಪಾತದ ತಾತ್ಕಾಲಿಕ ಪಟ್ಟಿಯನ್ನು ಇಲಾಖಾ ವೆಬ್ಸೈಟ್ನಲ್ಲಿ ವಿಶೇಷಾಧಿಕಾರಿ, ಕೇಂದ್ರೀಕೃತ ದಾಖಲಾತಿ ಘಟಕ, ಬೆಂಗಳೂರು ಇವರು ಪ್ರಕಟಿಸಿದ್ದಾರೆ.
ಅರ್ಹತಾ ಪಟ್ಟಿಯಲ್ಲಿರುವ ಅ್ಯರ್ಥಿಗಳಿಗೆ ಸೆ.3ರಿಂದ 6ರವರೆಗೆ ಜಿಲ್ಲಾ ಹಂತದ ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿ 1:3 ಪರಿಶೀಲನಾ ಪಟ್ಟಿಯಂತೆ ಅ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸಂಬಂಧಿಸಿದ ಅ್ಯರ್ಥಿಗಳು ಸಮರ್ಪಕ ದಾಖಲಾತಿ ಗಳೊಂದಿಗೆ ದ್ವಿಪ್ರತಿಯಲ್ಲಿ ಗಜೆಟಡ್ ಅಧಿಕಾರಿಯಿಂದ ಧೃಡೀಕೃತ ಪ್ರತಿ, ಇತ್ತೀಚಿನ 2 ಭಾವಚಿತ್ರಗಳು, ಸ್ವವಿಳಾಸ ಮಾಹಿತಿ, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯ ಮಾಹಿತಿಗಳೊಂದಿಗೆ ನಿಗದಿಪಡಿಸಿದ ದಿನದಂದು ಪರಿಶೀಲನೆಗೆ ಹಾಜರಾಗಬೇಕು.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ:0820-2574878 ನ್ನು ಸಂಪರ್ಕಿಸುವಂತೆ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.