ಉಡುಪಿ: ಬ್ಯಾನರ್, ಕಟೌಟ್ಗಳಿಗೆ ಅನುಮತಿ ಕಡ್ಡಾಯ
ಉಡುಪಿ, ಸೆ.1: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೇ ಅನಧಿಕೃತವಾಗಿ ಬ್ಯಾನರ್, ಕಟೌಟ್, ಫ್ಲೆಕ್ಸ್ಗಳನ್ನು ಅಳವಡಿಸಿ ವಾಹನ ಸಂಚಾರ ಹಾಗೂ ಸಾರ್ವಜನಿಕರ ತಿರುಗಾಟಕ್ಕೆ ತೊಂದರೆ ಪಡಿಸುತ್ತಿರುವುದು ಕಂಡು ಬಂದಿದ್ದು, ಯಾವುದೇ ಪ್ರಚಾರಗಳ ಬ್ಯಾನರ್/ಕಟೌಟ್, ಫ್ಲೆಕ್ಸ್ಗಳನ್ನು ಅಳವಡಿಸುವ ಮುಂಚಿತವಾಗಿ ನಗರಸಭೆ ಕಚೇರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಅನಧಿಕೃತವಾಗಿ ಇವುಗಳನ್ನು ಅಳವಡಿಸಿ ಸಾರ್ವಜನಿಕ ಸ್ಥಳವನ್ನು ವಿರೂಪ ಗೊಳಿಸಿದ್ದಲ್ಲಿ ಕರ್ನಾಟಕ ಪುರಸಭಾ ನಿಯಮ 136ರಂತೆ ಕ್ರಮ ಜರಗಿಸಲಾಗುವುದು ಎಂದು ಉಡುಪಿ ನಗರಸಭೆಯ ಪೌರಾುುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story