ಉಳ್ಳಾಲ ನಗರಸಭೆ ಚುನಾವಣೆಯ ಫಲಿತಾಂಶ ವಿವರ
ಮಂಗಳೂರು, ಸೆ.3: ಉಳ್ಳಾಲ ನಗರಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದೆ. ಬೆಳಗ್ಗೆ 8.40ರ ವೇಳೆ 10 ವಾರ್ಡ್ಗಳ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದೆ. ಈ ಪೈಕಿ ನಾಲ್ಕು ವಾರ್ಡ್ಗಳಲ್ಲಿ ಜೆಡಿಎಸ್, 3ರಲ್ಲಿ ಕಾಂಗ್ರೆಸ್ ಹಾಗೂ 3ರಲ್ಲಿ ಎಸ್ಡಿಪಿಐ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
# ಸಮಯ 9 ಗಂಟೆ
ಫಲಿತಾಂಶ ಪ್ರಕಟಗೊಂಡಿರುವ ವಾರ್ಡ್ಗಳ ಪೈಕಿ ಕಾಂಗ್ರೆಸ್ 8, ಎಸ್ಡಿಪಿಐ 6, ಜೆಡಿಎಸ್ 4 , ಬಿಜೆಪಿ 2 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕೆರೆಬೈಲು 16ನೇ ವಾರ್ಡ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಮಬಲದ ಮತಗಳನ್ನು ಪಡೆದು ಕುತೂಹಲಕ್ಕೆ ಕಾರಣವಾಗಿದ್ದಾರೆ.
ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ತಲಾ 370 ಮತಗಳನ್ನು ಪಡೆದಿದ್ದಾರೆ.
Next Story