ಉಳ್ಳಾಲ ನಗರಸಭೆ: ಇಬ್ಬರು ಅಭ್ಯರ್ಥಿಗಳಿಗೆ ಸಮಾನ ಮತ!
ಮಂಗಳೂರು, ಸೆ.3: ಉಳ್ಳಾಲ ನಗರಸಭೆಗೆ ನಡೆದ ಚುನಾವಣೆಯಲ್ಲಿ ಕೆರೆಬೈಲು 16ನೇ ವಾರ್ಡ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಮಬಲದ ಮತಗಳನ್ನು ಪಡೆದು ಕುತೂಹಲಕ್ಕೆ ಕಾರಣವಾಗಿದ್ದಾರೆ.
ಇಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ರೈ ತಲಾ 370 ಮತಗಳನ್ನು ಪಡೆದಿದ್ದಾರೆ.
ಇಲ್ಲಿ ಅಂತಿಮವಾಗಿ ವಿಜೇತ ಅಭ್ಯರ್ಥಿಗಳನ್ನು ಚೀಟಿ ಎತ್ತುವ ಮೂಲಕ ಆರಿಸಲಾಯಿತು. ಇದರಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಅವರು ಅದೃಷ್ಟದ ಗೆಲುವು ಸಾಧಿಸಿದ್ದಾರೆ. ಇವರ ಗೆಲುವಿನೊಂದಿಗೆ ಬಿಜೆಪಿ ಒಟ್ಟು ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದಂತಾಯಿತು.
Next Story