ಬಂಟ್ವಾಳ ಪುರಸಭೆ: ಅತಂತ್ರ ಫಲಿತಾಂಶ
ಬಂಟ್ವಾಳ, ಸೆ.3: ಶುಕ್ರವಾರ ನಡೆದ ಬಂಟ್ವಾಳ ಪುರಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಅತಂತ್ರ ಫಲಿತಾಂಶ ಕಂಡುಬಂದಿದೆ.
ಒಟ್ಟು 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 11 ಹಾಗೂ ಎಸ್ಡಿಪಿಐ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು 14 ಸ್ಥಾನಗಳ ಆವಶ್ಯವಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಸೋಮವಾರ ಬೆಳಗ್ಗೆ 8 ಗಂಟೆಯಿಂದ ಬಿ.ಸಿ.ರೋಡ್ನ ಮಿನಿ ವಿಧಾನಸೌಧದಲ್ಲಿ ಮತ ಎಣಿಕಾ ಪ್ರಕ್ರಿಯೆ ನಡೆಯಿತು.
Next Story