ಸಾಲಿಗ್ರಾಮ ಪ.ಪಂ.: ಒಂದು ಮತ ಅಂತರದಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿ!
ಉಡುಪಿ, ಸೆ.3: ಸಾಲಿಗ್ರಾಮ ಪಟ್ಟಣ ಪಂಚಾಯತ್ನ ತೋಡುಕಲ್ಲು ವಾರ್ಡ್ನಲ್ಲಿ ಜಿದ್ದಾಜಿದ್ದಿನ ಪೈಪೋಟಿಯ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಒಂದು ಮತದ ಅಂತರದಿಂದ ಗೆಲುವು ಕಂಡಿದ್ದಾರೆ.
ಇಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಪುನೀತ್ ಪೂಜಾರಿಯವರು ಬಿಜೆಪಿ ಅಭ್ಯರ್ಥಿ ಕರುಣಾಕರ ಅವರ ವಿರುದ್ಧ ಒಂದು ಮತದ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ. ಇಲ್ಲಿ ಪುನೀತ್ ಹಾಗೂ ಕರುಣಾಕರ ಇಬ್ಬರು ತಲಾ 354 ಮತಗಳನ್ನು ಗಳಿಸಿದ್ದರು. ಆದರೆ ಪುನೀತ್ ಅವರಿಗೆ ಒಂದು ಅಂಚೆ ಲಭಿಸಿದ್ದರಿಂದ ಅವರು ಗೆಲುವಿನ ನಗೆ ಬೀರಿದರು.
ಪ್ರಥಮ ಬಾರಿಗೆ ಸ್ಪರ್ಧಿಸಿರುವ ಪುನೀತ್ ಜಯಭೇರಿ ಬಾರಿಸಿದ್ದಾರೆ. ಇಲ್ಲಿ ಅವರ ವಿರುದ್ಧ ಒಂದು ಮತದ ಅಂತರದಿಂದ ಸೋಲುಂಡ ಕರುಣಾಕರ ಅವರು ಬಿಜೆಪಿಯಿಂದ 4 ಬಾರಿ ಗೆಲುವು ಸಾಧಿಸಿದ್ದ ಅಭ್ಯರ್ಥಿ. ಅದಲ್ಲದೆ ಅವರು ಪಟ್ಟಣ ಪಂಚಾಯತ್ ಉಪಾಧ್ಯಕ್ಷರೂ ಕೂಡಾ ಆಗಿದ್ದರು.
Next Story