ಬಂಟ್ವಾಳ ಪುರಸಭೆ: ನಂದರಬೆಟ್ಟುವಿನಲ್ಲಿ ಕಾಂಗ್ರೆಸ್ಗೆ 4 ಮತಗಳ ಅಂತರದ ಗೆಲುವು!
ಬಂಟ್ವಾಳ, ಸೆ.3: ಬಂಟ್ವಾಳ ಪುರಸಭಾ ಚುನಾವಣೆಯ ವಾರ್ಡ್ 16ರಲ್ಲಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ನಡುವೆ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ 4 ಮತಗಳ ಅಲ್ಪ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
16ನೇ ನಂದರಬೆಟ್ಟು ಕಾಂಗ್ರೆಸ್ ಅಭ್ಯರ್ಥಿ ಮುಹಮ್ಮದ್ ನಂದರಬೆಟ್ಟು ಅವರು ಎಸ್ಡಿಪಿಐ ಅಭ್ಯರ್ಥಿ ಶಾಹುಲ್ ಹಮೀದ್ ಅವರನ್ನು ನಾಲ್ಕು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಒಟ್ಟು ಚಲಾವಣೆಯಾಗಿದ್ದ 1,046 ಮತಗಳ ಪೈಕಿ ಕಾಂಗ್ರೆಸ್ 477, ಎಸ್ಡಿಪಿಐ 473, ಬಿಜೆಪಿ ಅಭ್ಯರ್ಥಿ 88 ಮತಗಳನ್ನು ಗಳಿಸಿದ್ದಾರೆ. 4 ನೋಟಾ ಮತ ಚಲಾವಣೆಯಾಗಿವೆ.
Next Story