ಬಂಟ್ವಾಳ ಪುರಸಭಾ ಚುನಾವಣೆ: ಅಬೂಬಕರ್ ಸಿದ್ದೀಕ್ಗೆ ಅತಿ ದೊಡ್ಡ ಗೆಲುವು
ಬಂಟ್ವಾಳ, ಸೆ.3: ಪುರಸಭೆಯ 27 ಸ್ಥಾನಗಳಿಗೆ ಆಗಸ್ಟ್ 31ರಂದು ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಬೆಳಗ್ಗೆ ಪ್ರಕಟಗೊಂಡಿದ್ದು, ಇಲ್ಲಿನ 24ನೇ ಆಲಡ್ಕ-ಬಂಗ್ಲೆಗುಡ್ಡೆ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಇಡೀ ಪುರಸಭೆಯಲ್ಲೇ ಅತ್ಯಧಿಕ ಹೆಚ್ಚಿನ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಕ್ಷೇತ್ರದ ಒಟ್ಟು 1,307 ಮತಗಳ ಪೈಕಿ 962 ಮಂದಿ ಮತದಾರರು ತಮ್ಮ ಪರಮಾಧಿಕಾರ ಚಲಾಯಿಸಿದ್ದರು. ಈ ಪೈಕಿ ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ 583 ಮತಗಳನ್ನು ಪಡೆಯುವ ಮೂಲಕ ಬರೋಬ್ಬರಿ 407 ಮತಗಳ ಅಂತರದ ಭರ್ಜರಿ ಜಯಭೇರಿ ಭಾರಿಸಿದ್ದಾರೆ.
ಕ್ಷೇತ್ರದ ಇತರ ಅಭ್ಯರ್ಥಿಗಳಾದ ಎಸ್ಡಿಪಿಐ ಪಕ್ಷದ ಯೂಸುಫ್ 176, ಬಿಜೆಪಿಯ ಜೆ.ಮುಹಮ್ಮದ್ 75, ಜೆಡಿಎಸ್ ಪಕ್ಷದ ಮುಹಮ್ಮದ್ ಅಮಾನುಲ್ಲಾ 67 ಮತಗಳನ್ನು ಪಡೆದರೆ, ಓರ್ವ ಮತದಾರ ನೋಟಾ ಚಲಾಯಿಸಿದ್ದಾರೆ.
Next Story