ಮಂಗಳೂರು: ತವರಿಗೆ ಮರಳಿದ ಹಜ್ಜಾಜ್ಗಳು
ಮಂಗಳೂರು, ಸೆ.3: ಕರ್ನಾಟಕದಿಂದ ಹಜ್ ಯಾತ್ರೆಗೈದ ಮೂರು ತಂಡವು ಕ್ರಮವಾಗಿ ಶನಿವಾರ ಮತ್ತು ರವಿವಾರ ರಾತ್ರಿ ಹಾಗೂ ಸೋಮವಾರ ಸಂಜೆ ರಾತ್ರಿ ಮರಳಿದೆ. ಇದರೊಂದಿಗೆ ಮಂಗಳೂರಿನಿಂದ ಹೊರಟಿದ್ದ ತಲಾ 144 ಮಂದಿಯನ್ನು ಒಳಗೊಂಡ ಮೂರು ತಂಡಗಳ ಹಜ್ಜಾಜ್ಗಳು ಯಾವುದೇ ಸಮಸ್ಯೆ ಇಲ್ಲದೆ ಮರಳಿದಂತಾಗಿದೆ.
ಜು.21,22,23ರಂದು ಮಂಗಳೂರಿನಿಂದ ಹಜ್ ಯಾತ್ರೆಕೈಗೊಂಡಿದ್ದ ತಲಾ 144 ಮಂದಿಯನ್ನು ಒಳಗೊಂಡ ಮೂರು ತಂಡವು 41 ದಿನಗಳ ಹಜ್ ಕ್ರಿಯೆಗಳನ್ನು ಮುಗಿಸಿ ಮರಳಿದೆ ಎಂದು ಮೂಲಗಳು ತಿಳಿಸಿವೆ.
Next Story