ಪುತ್ತೂರು ನಗರಸಭೆ: ಖಾತೆ ತೆರೆದ ಎಸ್ಡಿಪಿಐ
ಪುತ್ತೂರು, ಸೆ. 3: ನಗರಸಭೆಯಲ್ಲಿ ಓರ್ವ ಮಹಿಳೆ ಗೆಲುವು ಪಡೆಯುವ ಮೂಲಕ ಎಸ್ಡಿಪಿಐ ಖಾತೆ ತೆರೆದಿದೆ. ಇಲ್ಲಿನ ವಾರ್ಡ್ 5ರಲ್ಲಿ ಸ್ಪರ್ಧಿಸಿದ್ದ ಕೆ. ಫಾತಿಮತ್ ಝವುರ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವೀಣಾಕ್ಷಿ ಎಸ್ ಪೂಜಾರಿ ಅವರನ್ನು 26 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಫಾತಿಮತ್ ಝವುರ ಅವರು 448 ಮತಗಳನ್ನು ಪಡೆದಿದ್ದು, ಬಿಜೆಪಿಯ ವೀಣಾಕ್ಷಿ ಪೂಜಾರಿ ಅವರು 422 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಇಲ್ಲಿ 3ನೇ ಸ್ಥಾನಕ್ಕೆ ಹೋಗಿದ್ದು ಕಾಂಗ್ರೆಸ್ನ ಶಾರದಾ ಅರಸ್ 253 ಮತಗಳನ್ನು ಪಡೆದುಕೊಂಡಿದ್ದಾರೆ.
Next Story