ನಿಧನ: ಬೈತಡ್ಕ ಯೂಸುಫ್ ಹಾಜಿ
ಪುತ್ತೂರು, ಸೆ. 4: ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು ಇದರ ಆಡಳಿತ ಟ್ರಸ್ಟಿಗಳಲ್ಲೊಬ್ಬರಾದ ಹಾಜಿ ಬಿ.ಪಿ. ಯೂಸುಫ್ ಬೈತಡ್ಕ (53) ಹೃದಯಾಘಾತಕ್ಕೊಳಗಾಗಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉತ್ಸಾಹಿ ಸಮಾಜ ಸೇವಕರಾಗಿದ್ದ ಯೂಸುಫ್ ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮೃತರ ಸಹೋದರ ಹಾಜಿ ಬಿ.ಪಿ.ಅಬ್ದುಲ್ ಹಮೀದ್, ಸಂಚಾಲಕ ಮುಸ್ತಫಾ ಸಅದಿ ಶಿರ್ವ, ಕೋಶಾಧಿಕಾರಿ ಹಾಜಿ ಪುತ್ತುಬಾವ ಸವಣೂರು, ಆಡಳಿತಾಧಿಕಾರಿ ಕೆ.ಎಂ. ಅಬೂಬಕರ್ ಸಿದ್ದೀಕ್, ಪ್ರಿನ್ಸಿಪಾಲ್ ಆಂಡ್ರೂಸ್ ಪಿ.ಎ. ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಯುತರ ಗೌರವಾರ್ಥ ಈಡನ್ ವಿದ್ಯಾ ಸಂಸ್ಥೆಗೆ ರಜೆ ಸಾರಲಾಗಿದೆ.
Next Story