ಶಿಕ್ಷಕರ ದಿನಾಚರಣೆ: ಎಸ್ಕೆಪಿಎಯಿಂದ ನಿವೃತ್ತ ಶಿಕ್ಷಕಿಗೆ ಸನ್ಮಾನ
ಉಡುಪಿ, ಸೆ.6: ಸೌತ್ ಕೆನರಾ ಪೋಟೋಗ್ರಾಪರ್ಸ್ ಆಸೋಶಿಯೇಶನ್ ಉಡುಪಿ ದ.ಕ. ಇದರ ಉಡುಪಿ ವಲಯದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆ.5ರಂದು ಅಂಬಲಪಾಡಿ ಬಂಕೆರಕಟ್ಟ ನಿವಾಸಿ 73 ವರ್ಷ ಪ್ರಾಯದ ನಿವೃತ್ತ ಶಿಕ್ಷಕಿ ರೀಟಾ ಅಂದ್ರಾದೆಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ವಲಯದ ಅಧ್ಯಕ್ಷ ಅನೀಶ್ ಶೆಟ್ಟಿಗಾರ್, ಕಾರ್ಯದರ್ಶಿ ದಿನೇಶ್ ಕಾಂಚನ್, ಖಜಾಂಚಿ ಮಂಜುನಾಥ್ ದೇವಾಡಿಗ, ಜಿಲ್ಲಾ ಸಲಹ ಸಮಿತಿ ಸದಸ್ಯ ಮತ್ತು ರಜತ ಮಹೋತ್ಸವ ಕಟ್ಟಡ ಸಮಿತಿ ಅಧ್ಯಕ್ಷ ಜಯಕರ್ ಸುವರ್ಣ, ಖಜಾಂಚಿ ಸುಂದರ್ ಪೂಜಾರಿ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಶಿವ ಕೆ.ಅಮೀನ್, ಸಮಿತಿ ಸದಸ್ಯ ಸುರೇಶ್ ಕಿದಿಯೂರು, ಪ್ರಿಂಟ್ ಪ್ಯಾಲೆಸ್ ಲ್ಯಾಬ್ನ ಅನಿಲ್ ಶೆಟ್ಟಿ, ರೋನಿ ಅಂದ್ರಾದೆ ಮೊದಲಾದವರು ಉಪಸ್ಥಿತರಿದ್ದರು.
Next Story