ಮಂಗಳೂರು: ಪೊಲೀಸ್ ಬಂದೋಬಸ್ತ್
ಭಾರತ್ ಬಂದ್
ಮಂಗಳೂರು, ಸೆ.9: ಇದೇ ಸೆ.10ರಂದು ನಡೆಸಲು ಉದ್ದೇಶಿಸಿರುವ ಬಂದ್ ಆಚರಣೆಯ ಸಂದರ್ಭ ಬಂದೋಬಸ್ತ್ ಕರ್ತವ್ಯಕ್ಕಾಗಿ ಮಂಗಳೂರು ನಗರ ಪೊಲೀಸ್ ವತಿಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈಗಾಗಲೇ 1 ಡಿಸಿಪಿ, 4 ಎಸಿಪಿ, 25 ಪೊಲೀಸ್ ಇನ್ಸ್ಪೆಕ್ಟರ್, 30 ಪಿಎಸ್ಸೈ ಮತ್ತು 1,000 ಸಿವಿಲ್ ಸಿಬ್ಬಂದಿ, 150 ಹೋಮ್ ಗಾರ್ಡ್ಸ್, 4 ಕೆಎಸ್ಆರ್ಪಿ ತುಕುಡಿ, 10 ಸಿಎಆರ್ ತುಕುಡಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಈ ಸಂದರ್ಭ ಯಾವುದೇ ಆಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಸಮಾಜ ಘಾತುಕ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ಇಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.
Next Story