ಸೆ.13: ಎಸ್ಸೆಸ್ಸೆಫ್ನಿಂದ ಟೀಮ್ ಹಸನೈನ್ ತರಬೇತಿ ಶಿಬಿರ
ಮಂಗಳೂರು, ಸೆ.10: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಟೀಮ್ ಹಸನೈನ್ ತರಬೇತಿ ಶಿಬಿರವು ಸೆ.13ರಂದು ಅಪರಾಹ್ನ 2 ಗಂಟೆಗೆ ಮಂಜನಾಡಿಯ ಅಲ್ ಮದೀನಾ ಯತೀಂ ಖಾನದಲ್ಲಿ ನಡೆಯಲಿದೆ.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಡಗು ಅಧ್ಯಕ್ಷತೆ ವಹಿಸುವರು.ಅಲ್ ಮದೀನಾ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಶಿಬಿರವನ್ನು ಉದ್ಘಾಟಿಸುವರು.ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ಕೋಶಾಧಿಕಾರಿ ಶರೀಫ್ ಬೆಂಗಳೂರು ತರಗತಿ ನಡೆಸಿಕೊಡುವರು ಎಂದು ಪ್ರಕಟನೆ ತಿಳಿಸಿದೆ.
Next Story