ಫಾ. ಮುಲ್ಲಾರ್ ನರ್ಸಿಂಗ್ ಕೋರ್ಸ್ ತರಗತಿಗಳಿಗೆ ಚಾಲನೆ
ಮಂಗಳೂರು, ಸೆ.12: ನ್ಯಾಕ್ನಿಂದ ಎ ಗ್ರೇಡ್ ಮಾನ್ಯತೆ ಪಡೆದಿರುವ ಫಾದರ್ ಮುಲ್ಲಾರ್ ನರ್ಸಿಂಗ್ ಕಾಲೇಜ್ನ ಬಿಎಸ್ಸಿನರ್ಸಿಂಗ್ನ 32ನೆ ಬ್ಯಾಚ್, ಪಿಬಿಬಿಎಸ್ಸಿಯ 27ನೆ ಬ್ಯಾಚ್ ಹಾಗೂ ಹಾಗೂ ಎಂಸ್ಸಿ ನರ್ಸಿಂಗ್ ಕೊರ್ಸ್ನ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಸೆ.11ರಂದು ಚಾಲನೆ ಗೊಂಡಿದೆ.
ಫಾದರ್ ಮುಲ್ಲಾರ್ ಚ್ಯಾರಿಟೇಬಲ್ ಇನ್ಸಟ್ಯೂಟ್ನ ಆಡಳಿತಾಧಿಕಾರಿ ವಂ. ರಿಚರ್ಡ್ಸ್ ಅಲೊಶಿಯಸ್ ಕುವೆಲ್ಲೋ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ನ ನೋಂದಣಾಧಿಕಾರಿ ಶ್ರೀಕಾಂತ್ ಬಿ.ಪುಲ್ಲಾರಿ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಂಶುಪಾಲೆ ಜೆಸಿಂತ ಡಿ ಸೋಜ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ವೇತಾ ರಶ್ಮೀ ವಂದಿಸಿದರು.
Next Story