ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್: ಸೆ.16 ರಂದು ಝೀಲ್ ಕ್ಯಾಂಪ್
ಬಂಟ್ವಾಳ,ಸೆ.14: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ ಸಕ್ರಿಯ ಕಾರ್ಯಕರ್ತರಿಗೆ ವಿಶೇಷ ಝೀಲ್ ಕ್ಯಾಂಪ್ ಅನ್ನು ಸೆ.16 ರಂದು ಆದಿತ್ಯವಾರ ಮಧ್ಯಾಹ್ನ 1:30 ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕ್ಯಾಂಪ್ ರಿಜಿಷ್ಟ್ರೇಷನ್ ಮಧ್ಯಾಹ್ನ 01:30 ಕ್ಕೆ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಹಮ್ಮದ್ ಅಲೀ ಮದನಿ ಸೆರ್ಕಳ ಸ್ವಾಗತ ಕೋರಲಿದ್ದಾರೆ. ಅಧ್ಯಕ್ಷತೆಯನ್ನು ಬಂಟ್ವಾಳ ಡಿವಿಷನ್ ಅಧ್ಯಕ್ಷ ವಿ.ಅಬ್ದುಲ್ ರಶೀದ್ ಹಾಜಿ ವಹಿಸಲಿದ್ದಾರೆ.
ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟನೆ ಮಾಡಲಿದ್ದು, ಇಸ್ಹಾಖ್ ಝುಹ್ರಿ ಸೂರಿಂಜೆ ತರಗತಿ ನಡೆಸಿಕೊಡಲಿದ್ದಾರೆ. ನಂತರ ಡಿವಿಷನ್ ನಾಯಕರ ನಾಯಕತ್ವದಲ್ಲಿ ಚರ್ಚೆ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
Next Story