ಭಾಸ್ಕರ್ ಶೆಟ್ಟಿ ಪ್ರಕರಣ: ಒಟ್ಟು 28 ಸಾಕ್ಷಿಗಳ ವಿಚಾರಣೆ
ಉಡುಪಿ, ಸೆ.15: ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈವರೆಗೆ ಒಟ್ಟು 28 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ.
ಸೆ.4ರಂದು ಮೂವರು ಹಾಗೂ ಸೆ.5ರಂದು ನಾಲ್ಕು ಮಂದಿ ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಹಾಗೂ ಪಾಟಿ ಸವಾಲನ್ನು ಆರೋಪಿ ಪರ ವಕೀಲರು ನಡೆಸಿದ್ದರು. ಈ ಮೂಲಕ ಪ್ರಕರಣದ ಒಟ್ಟು 167 ಸಾಕ್ಷಿಗಳ ಪೈಕಿ ಈವರೆಗೆ 28 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮುಂದಿನ ಸಾಕ್ಷಿಗಳ ವಿಚಾರಣೆಯು ಸೆ.20 ಮತ್ತು 28ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Next Story