ಕಾಪು: ಮೆಟ್ಟಿಲಿನಿಂದ ಬಿದ್ದು ಮೃತ್ಯು
ಕಾಪು, ಸೆ.15: ಕಾಪು ವೈಶಾಲಿ ಬಾರಿನ ಕಟ್ಟಡದ ಒಂದನೆ ಮಹಡಿಯ ಮೆಟ್ಟಿಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹನಮಪ್ಪ ಯಾನೆ ವಾರೆಪ್ಪಮೂರಮಟ್ಟಿ(55) ಎಂದು ಗುರುತಿಸಲಾಗಿದೆ. ಬಾರಿನಲ್ಲಿ ಕೆಲಸ ಮಾಡುತ್ತಿರುವ ಇವರು ಸೆ.9ರಂದು ರಾತ್ರಿ ವೇಳೆ ಸ್ನಾನ ಮುಗಿಸಿ ಒಂದನೇ ಮಹಡಿಯಿಂದ ಮೆಟ್ಟಿಲಿನ ಮೂಲಕ ಕೆಳಗೆ ಬರುತ್ತಿರುವಾಗ ಕತ್ತಲೆ ಯಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇವರು ಸೆ.13ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story