ಶಾಸ್ತ್ರೀಯ ವಾದ್ಯ ಸಂಗೀತ ವಿದ್ಯಾರ್ಥಿಗಳ ಸಾಧನೆ
ಉಡುಪಿ, ಸೆ.16: ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಇಂಜಿನಿಯರ್ ಚೇತನ್ ರಾವ್ ಶೇ.94.75 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಲಿಟಲ್ರಾಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಆದಿತ್ಯ ಎಂ.ಅಡಿಗ ಶೇ.91.75 ಅಂಕ(ದ್ವಿತೀಯ), ಮಾಧವ ಕೃಪಾ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಅಪರ್ಣ ಕಾರಂತ್ ಶೇ.86.75 ಅಂಕ(ತೃತೀಯ), ಸೀನಿಯರ್ ಪರೀಕ್ಷೆಯಲ್ಲಿ ಮಣಿಪಾಲ ಎಂಐಟಿ ಎಂಟೆಕ್ ವಿದ್ಯಾರ್ಥಿನಿ ಶ್ರೇಷ್ಠ ಶೇ.82 ಅಂಕ ಗಳಿಸಿದ್ದಾರೆ.
ಶಾಸ್ತ್ರೀಯ ವಾದ್ಯ ಸಂಗೀತದಲ್ಲಿ ಸಾಧನೆಗೈದ ನಾಲ್ವರು ವಿದ್ಯಾರ್ಥಿಗಳು ಇಂದ್ರಾಳಿ ಹಯಗ್ರೀವ ನಗರದ ನಿನಾದ ಆಕಾಡೆಮಿಯ ವಿದ್ವಾನ್ ಜಿ. ರವಿ ಕುಮಾರ್ ಮೈಸೂರು ಅವರ ಶಿಷ್ಯರಾಗಿದ್ದಾರೆ.
Next Story