ಸೆ.18: ಚಿಕ್ಕಮಗಳೂರಿನಲ್ಲಿ ಬ್ಯಾರೀಸ್ ಚೇಂಬರ್ ಘಟಕ ಉದ್ಘಾಟನೆ
ಮಂಗಳೂರು, ಸೆ. 16: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಮಲೆನಾಡು ಘಟಕದ ಉದ್ಘಾಟನೆ ಸೆ.18ರಂದು ಮಧ್ಯಾಹ್ನ 2 ಗಂಟೆಗೆ ಚಿಕ್ಕಮಗಳೂರಿನ ಬ್ಲೂ ಮೌಂಟೇನ್ ವ್ಯಾಲಿ ರಿಸಾರ್ಟ್ನಲ್ಲಿ ನಡೆಯಲಿದೆ.
ಮಲೆನಾಡಿನ ಬ್ಯಾರಿ ಸಮುದಾಯದ ವರ್ತಕರು ಕ್ಲಪ್ತ ಸಮಯಕ್ಕೆ ಭಾಗವಹಿಸಬೇಕಾಗಿ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ.ರಶೀದ್ ಮತ್ತು ಬಿಸಿಸಿಐ ಮಲೆನಾಡು ಘಟಕದ ಸಂಯೋಜಕ ಸಿ.ಕೆ. ಇಬ್ರಾಹೀಮ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story