ಬಜ್ಪೆ: ಎಸ್ಸೆಸ್ಸೆಫ್ ಧ್ವಜ ದಿನಾಚರಣೆ
ಬಜ್ಪೆ, ಸೆ.19: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) 30ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ವತಿಯಿಂದ ಮೂವತ್ತು ಧ್ಚಜಗಳ ಆರೋಹಣ ಮಾಡುವ ಮೂಲಕ ಧ್ವಜ ದಿನವನ್ನು ಆಚರಿಸಲಾಯಿತು.
ಬಜ್ಪೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಮರ್ ಮುಸ್ಲಿಯಾರ್ ಬಜ್ಪೆ ದುಆ ಮೂಲಕ ಉದ್ಘಾಟಿಸಿದರು.
ಎಸ್ವೈಎಸ್ ದ.ಕ. ಜಿಲ್ಲಾ ಕಾರ್ಯದರ್ಶಿ ಹಾಜಿ ಸಲೀಮ್ ಡಿಲಕ್ಸ್ ಬಜ್ಪೆ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯ ಸುಪ್ರೀಂ ಕೌನ್ಸಿಲ್ ಮುಖಂಡ ಅಬ್ದುಲ್ ಹಮೀದ್ ಬಜ್ಪೆ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ವೈಎಸ್ ಬಜ್ಪೆ ಸೆಂಟರ್ ಮುಖಂಡರಾದ ಅಹ್ಮದ್ ಹುಸೈನ್ ಶಾಫಿ ಬಜ್ಪೆ, ಬಶೀರ್ ಅಲ್ ರಫಾ ಬಜ್ಪೆ, ಮುಹಮ್ಮದ್ ಹನೀಫ್ ಕೆ.ಪಿ ನಗರ, ರಫೀಖ್ ಜರಿನಗರ, ಕೆಸಿಎಫ್ ಪ್ರತಿನಿಧಿಗಳಾದ ಅನ್ಸಾರ್ ಬಹ್ರೇನ್, ಮುಸ್ತಫಾ ಕೆಎಸ್ಎ, ಹಿಶಾಂ ದುಬೈ, ಮುಝೀರ್ ಒಮಾನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸೆಕ್ಟರ್ ಅಧ್ಯಕ್ಷ ಶಾಕಿರ್ ಎಮ್ಮೆಸ್ಸಿ ಸ್ವಾಗತಿಸಿದರು, ಡಿವಿಶನ್ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ವಂದಿಸಿದರು.