ಗ್ರೀನ್ ವ್ಯಾಲಿ ಸ್ಕೂಲ್, ಪಿಯು ಕಾಲೇಜಿನ ಪ್ರಾಂಶುಪಾಲ ಜಾನ್ ಮ್ಯಾಥ್ಯೂಗೆ ಪಿಎಚ್ಡಿ
ಶಿರೂರು, ಸೆ.19: ಇಲ್ಲಿನ ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲರಾಗಿರುವ ಜಾನ್ ಮ್ಯಾಥ್ಯೂ ಅವರಿಗೆ ಎಸ್ಎಸ್ಎಸ್ ತಾಂತ್ರಿಕ ಮತ್ತು ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾನಿಲಯ ಶಿಕ್ಷಣದಲ್ಲಿ ಪಿಎಚ್ಡಿ ಪದವಿ ನೀಡಿದೆ.
ಮಾಹಿತಿ ತಂತ್ರಜ್ಞಾನದ ಮೂಲಕ ವೃತ್ತಿಪರ ಸಿದ್ಧಾಂತದೊಂದಿಗೆ ಶಿಕ್ಷಣ ಗುಣಮಟ್ಟದಲ್ಲಿ ಜಾಗತಿಕ ಬದಲಾವಣೆ ಎಂಬ ವಿಷಯದಲ್ಲಿ ಮ್ಯಾಥ್ಯೂ ಅವರು ನಡೆಸಿದ ಸಂಶೋಧನೆಗೆ ಪಿಎಚ್ಡಿ ನೀಡಲಾಗಿದೆ. ಜಾನ್ ಮ್ಯಾಥ್ಯೂ ಅವರು ಗಾಝಿಯಾಬಾದ್ ಐಎಸ್ಇ ಡಾ. ನಿಧಿ ಗೋಯಲ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದಾರೆ.
Next Story