ಎಸ್ಸೆಸ್ಸೆಫ್ ಮುಕ್ಕ ಘಟಕದಿಂದ ಧ್ವಜ ದಿನಾಚರಣೆ
ಸುರತ್ಕಲ್, ಸೆ.19: ಎಸ್ಎಸ್ಎಫ್ ಮುಕ್ಕ ಘಟಕದ ವತಿಯಿಂದ ಧ್ವಜ ದಿನಾಚರಣೆಯನ್ನು ಇಂದು ಮುಕ್ಕ ಜುಮಾ ಮಸೀದಿ ಬಳಿ ಆಯೋಜಿಸ ಲಾಗಿತ್ತು.
ಮುಕ್ಕ ಮಸೀದಿಯ ಅಧ್ಯಕ್ಷ ಅಬ್ದುರ್ರಝಾಕ್ ಧ್ವಜಾರೋಹಣಗೈದರು. ಮನ್ಸೂರ್ ಮದನಿ ವಳವೂರು ದುವಾ ನೆರವೇರಿಸಿದರು. ಮುಖ್ಯ ಅತಿಥಿ ಗಳಾಗಿ ಎಸ್ಎಸ್ಎಫ್ ಸುರತ್ಕಲ್ ಡಿವಿಶನ್ ಅಧ್ಯಕ್ಷ ಆರಿಫ್ ಝುಹ್ರಿ ಮುಕ್ಕ, ಎಸ್ಎಸ್ಎಫ್ ಮುಕ್ಕ ಹಿರಿಯರ ವಿಭಾಗದ ಅಮೀರ್ ಇಕ್ರಿಮತ್ ಝಕರಿಯ, ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಉಮರ್ ಫಾರೂಕ್, ಕೋಶಾಧಿಕಾರಿ ಎಂ.ಎಂ.ಮೊಯ್ದಿನ್, ಮುಕ್ಕ ನುಸ್ರತುಲ್ ಮಸಾ ಕೀನ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುರ್ರಹ್ಮಾನ್, ಎಸ್ಎಸ್ಸಿಸಿ ಮುಕ್ಕ ಅಧ್ಯಕ್ಷ ಸುಹೈಲ್, ಎಸ್ಸೆಸ್ಸೆಫ್ ಮುಕ್ಕ ಘಟಕ ಅಧ್ಯಕ್ಷ ಝಕರಿಯ ಮುಸ್ಲಿಯಾರ್ ಮೊದ ಲಾದವರು ಉಪಸ್ಥಿತರಿದ್ದರು.
Next Story