ಭಾರತಿ ಕಾರಂತರಿಗೆ ಡಾಕ್ಟರೇಟ್ ಪದವಿ
ಉಡುಪಿ, ಸೆ.19: ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಭಾರತಿ ಕಾರಂತ್ ಇವರು ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರೊಫೆಸರ್ ಡಾ.ಯಶವಂತ ಡೋಂಗ್ರೆ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ ‘ಫಂಡ್ ಮ್ಯಾನೇಜ್ಮೆಂಟ್ ಇನ್ ನೊನ್ಪ್ರೊಫಿಟ್ ಓರ್ಗನೈಸೇಷನ್ಸ್: ಎ ಸ್ಟಡಿ ಆಫ್ ಡೆವೆಲಪ್ಮೆಂಟ್ ಎನ್ಜಿಒಸ್ ಇನ್ ಕೋಸ್ಟಲ್ ಕರ್ನಾಟಕ’ ಎಂಬ ಮಹಾ ಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.
ಭಾರತಿ ಕಾರಂತ್, ಎಂಐಟಿಯ ಮೆಕ್ಯಾನಿಕಲ್ ವಿಭಾಗದ ಪ್ರೊ. ಡಾ.ಕೆ. ವಾಸುದೇವ ಕಾರಂತರ ಪತ್ನಿ ಹಾಗೂ ಮಂಗಳೂರಿನ ಯಶೋದಾ ಮತ್ತು ಸುಬ್ರಹ್ಮಣ್ಯ ಹೆಬ್ಬಾರರ ಪುತ್ರಿ.
Next Story