ದ.ಕ. ಜಿಲ್ಲಾ ಫೈಝೀಸಿಗೆ ನೂತನ ಸಾರಥಿಗಳು
ಬಂಟ್ವಾಳ, ಸೆ. 19: ದಕ್ಷಿಣ ಭಾರತದ ಅತ್ಯುನ್ನತ ವಿದ್ಯಾಕೇಂದ್ರ ಪಟ್ಟಿಕ್ಕಾಡ್ ಜಾಮಿಅ: ನೂರಿಯ್ಯ ಅರೆಬಿಕ್ ಕಾಲೇಜಿನಿಂದ ಫೈಝಿ ಬಿರುದು ಒಡೆದವರ ಒಕ್ಕೂಟವಾದ ದ.ಕ. ಜಿಲ್ಲಾ ಫೈಝೀಸಿನ ಮಹಾಸಭೆಯ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಅ: ಕೆ.ಆಲಿ ಕುಟ್ಟಿ ಉಸ್ತಾದರ ನೇತೃತ್ವದಲ್ಲಿ ಮಿತ್ತಬೈಲು ಮದ್ರಸಾ ಸಭಾಂಗಣದಲ್ಲಿ ನಡೆಯಿತು.
ಸಮಸ್ತ ಕೇಂದ್ರ ಮುಶಾವರ ಉಪಾದ್ಯಕ್ಷ ಶೈಖುನಾ ಮಿತ್ತಬೈಲು ಉಸ್ತಾದ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ನೇವಿಸಲಾಯಿತು.
ಅಧ್ಯಕ್ಷರಾಗಿ ಬಜಲ್ ಅಬ್ದುಲ್ ರಹ್ಮಾನ್ ಫೈಝಿ, ಉಪಾಧ್ಯಕ್ಷರುಗಳಾಗಿ ಇಸ್ಮಾಯಿಲ್ ಫೈಝಿ ಕರಾಯ, ಹಬೀಬುರ್ರಹ್ಮಾನ್ ತಂಙಲ್ ಫೈಝಿ, ಮೂಸಲ್ ಫೈಝಿ, ಕಜೆಮಾರ್ ಅಬ್ದುಲ್ ರಹ್ಮಾನ್ ಫೈಝಿ, ಮಜೀದ್ ಫೈಝಿ ನಂದಾವರ, ಪ್ರಧಾನ ಕಾರ್ಯದರ್ಶಿಯಾಗಿ ಅಬೂ ಸ್ವಾಲಿಹ್ ಫೈಝಿ ಅಕ್ಕರಂಗಡಿ, ಜತೆ ಕಾರ್ಯದರ್ಶಿಯಾಗಿ ನಝೀರ್ ಫೈಝಿ ತೋಡಾರ್ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಸಲೀಂ ಫೈಝಿ ಇರ್ಷಾನಿ ಮೂಡಿಗೆರೆ, ವರ್ಕಿಂಗ್ ಕಾರ್ಯದರ್ಶಿಯಾಗಿ ಸಿರಾಜುದ್ದೀನ್ ಫೈಝಿ ಲೊರೆಟ್ಟೊ ಪದವು ಕೋಶಾಧಿಕಾರಿಯಾಗಿ ಶರೀಫ್ ಫೈಝಿ ಕಡಬ, ಪತ್ರಿಕಾ ಕಾರ್ಯದರ್ಶಿಯಾಗಿ ಶೈಖ್ ಮುಹಮ್ಮದ್ ಇರ್ಫಾನ್ ಎ.ಒ. ಸಿದ್ದೀಕ್ ಫೈಝಿ ಕರಾಯ ಮತ್ತು 21 ಸದಸ್ಯರನ್ನು ಆರಿಸಲಾಯಿತು.
ಕರ್ನಾಟಕ ರಾಜ್ಯ ಫೈಝೀಸ್ ಅಧ್ಯಕ್ಷ ಉಸ್ಮಾನುಲ್ ಫೈಝಿ ತೋಡಾರ್ ಸಾಲ್ಮರ ಉಮರ್ ಫೈಝಿ ಅಶ್ರಫ್ ಫೈಝಿ ಮಿತ್ತಬೈಲು ಉಪಸ್ಥಿತರಿದ್ದರು. ಶರೀಫ್ ಫೈಝಿ ಕಡಲು ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಕಾರ್ಯಕ್ರಮ ನಿರೂಪಿಸಿ ದನ್ಯವಾದಗೈದರು.