ಶಿಲ್ಪಾ ಹೆಲ್ತ್ ಕೇರ್ ಸೆಂಟರ್ನಲ್ಲಿ ಪಲ್ಸ್ಡ್ ಮ್ಯಾಗ್ನೆಟಿಕ್ ಫೀಲ್ಡ್ ಥೆರಪಿ ಸಲಕರಣೆ ಅನುಸ್ಥಾಪನೆ
ಮಂಗಳೂರು, ಸೆ.19: ಶಿಲ್ಪಾಹೆಲ್ತ್ ಕೇರ್ ಸೆಂಟರ್ನಲ್ಲಿ ಹೈ-ಟೆಕ್, ಪಲ್ಸ್ಡ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಥೆರಪಿ ಸಾಧನವನ್ನು ಅಳವಡಿಸಲಾಗಿದೆ. ಇದು ಚಿಕಿತ್ಸೆಗಾಗಿ ಐದನೇ ಘಟಕವೆಂದು ಪರಿಗಣಿಸಲಾಗಿದೆ. ತೀವ್ರ ಸ್ಥಾನಿಕ ವರ್ಟಿಗೊ ರೋಗವಿರುವ ರೋಗಿಯನ್ನು ಈ ಸಾಧನದ ಮೂಲಕ ಸಂಪೂರ್ಣವಾಗಿ ಗುಣಪಡಿಸಲಾಗಿದೆ. ಇದುವರೆಗೆ ನಾಲ್ಕು ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡಲಾಗಿದೆ. ಶಿಲ್ಪಾಹೆಲ್ತ್ ಕೇರ್ ಸೆಂಟರ್ನ ಇಎನ್ಟಿ ತಜ್ಞರಾದ ಡಾ. ದೇವನ್ ಈ ಸಲಕರಣೆಯನ್ನು ನಿರ್ವಹಿಸುತ್ತಾರೆ.
Next Story