ತಲೆದಿಂಬಿನಡಿಯಲ್ಲಿದ್ದ ಚಿನ್ನಾಭರಣ ಕಳವು
ಮಂಗಳೂರು, ಸೆ. 22: ರಾತ್ರಿ ಮನೆಯ ಕೊಠಡಿಯಲ್ಲಿ ಮಲಗುವಾಗ ತಲೆದಿಂಬಿನಡಿಯಲ್ಲಿಡಲಾಗಿದ್ದ ಚಿನ್ನಾಭರಣ ಮತ್ತು ಹಣವನ್ನು ಕಳವುಗೈದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿವೆ.
ತಲಪಾಡಿ ಗ್ರಾಮದ ಕೊಮರಂಗಳ ಬಳಿಯ ಎ.ಎಸ್.ವಿಲ್ಲಾ ನಿವಾಸಿಯಾದ ಶಬನಾ ಎಂಬವರಿಗೆ ಸೇರಿದ ಚಿನ್ನಾಭರಣ ಇದಾಗಿದೆ. ಶಬನಾಳದ ತಾಯಿ ಸೆ.19ರಂದು ರಾತ್ರಿ 10ಕ್ಕೆ ಮಲಗುವಾಗ ತಲೆದಿಂಬಿನಡಿಯಲ್ಲಿ 1.70 ಲಕ್ಷ ರೂ. ವೌಲ್ಯದ ವಜ್ರ ಮತ್ತು ಚಿನ್ನ ಲೇಪಿತ ಆಭರಣವನ್ನಿಟ್ಟಿದ್ದರು. ಮರುದಿನ ಬೆಳಗ್ಗೆ ಎದ್ದು ಸುಮಾರು 9 ಗಂಟೆಗೆ ನೋಡಿದಾಗ ಚಿನ್ನಾಭರಣವಲ್ಲದೆ ಹಾಗೂ 2,500 ರೂ. ಕಳವಾಗಿದೆ ಎಂದು ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story