ರಾಲ್ಫ್‌ಬಂಚ್‌ಗೆ ಶಾಂತಿ ನೊಬೆಲ್
1803: ಅಸ್ಸಾಯೆ ಕದನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಮರಾಠಾ ಸೈನ್ಯವನ್ನು ಸೋಲಿಸಿತು.
1821: ಗ್ರೀಕ್ ಸ್ವಾತಂತ್ರ ಹೋರಾಟ ಸಮಯದಲ್ಲಿ ಗ್ರೀಕ್ ಸೈನ್ಯವು ಸುಮಾರು 30,000 ಜನ ಟರ್ಕರನ್ನು ಹತ್ಯೆಗೈಯಿತು.
1863: 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದ ನಾಯಕರಲ್ಲೊಬ್ಬರಾದ ರಾವ್ ತುಲಾರಾಮ್ ಈ ದಿನ ಕಾಬೂಲ್‌ನಲ್ಲಿ ನಿಧನರಾದರು.
1877: ಕ್ಯುರಾಕೋವಾ ಮತ್ತು ಬೊನೈರ್ ದ್ವೀಪಪ್ರದೇಶಗಳಲ್ಲಿ ಬೀಸಿದ ಪ್ರಬಲ ಚಂಡಮಾರುತಕ್ಕೆ 200 ಜನ ಸಾವನ್ನಪ್ಪಿದ ವರದಿಯಾಗಿದೆ.
1950: ಇಸ್ರೇಲ್ ಮತ್ತು ಅರಬ್ ಸಂಘರ್ಷದಲ್ಲಿ ಸಂಧಾನಕಾರರಾಗಿ ಭಾಗವಹಿಸಿದ್ದ ಅಮೆರಿಕದ ರಾಲ್ಫ್ ಬಂಚ್‌ಗೆ ಈ ದಿನ ಅತ್ಯುನ್ನತ ಶಾಂತಿ ನೊಬೆಲ್ ಪುರಸ್ಕಾರ ಪ್ರದಾನಿಸಲಾಯಿತು. ಆ ಮೂಲಕ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಆಫ್ರೊ-ಅಮೆರಿಕನ್ ವ್ಯಕ್ತಿ ಎಂಬ ಗೌರವಕ್ಕೆ ರಾಲ್ಫ್ ಪಾತ್ರರಾದರು.
1972: ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೊಸ್ ತನ್ನ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಅಲ್ಲದೆ ಸೇನಾ ಆಡಳಿತವನ್ನು ಹೇರಿದರು.
1976: ಸೋವಿಯತ್ ಒಕ್ಕೂಟ ಉಡಾವಣೆ ಮಾಡಿದ್ದ ಸೋಯುಝ್ 22 ಬಾಹ್ಯಾಕಾಶ ನೌಕೆ ಈ ದಿನ ಭೂಮಿಗೆ ಮರಳಿತು.
1992: ಮಣ್ಣು ತುಂಬಿದ ವ್ಯಾಪಕ ಬಿರುಗಾಳಿಯಿಂದಾಗಿ ದಕ್ಷಿಣ ಫ್ರಾನ್ಸ್‌ನಲ್ಲಿ 30 ಜನ ಸಾವನ್ನಪ್ಪಿದರು.
2004: ಹೈಟಿ ದೇಶದಲ್ಲಿ ಜಿಯಾನ್ನೆ ಹೆಸರಿನ ಚಂಡಮಾರುತ ದಿಂದಾದ ಪ್ರವಾಹದಿಂದಾಗಿ 1,070 ಜನ ಸಾವನ್ನಪ್ಪಿದ ವರದಿಯಾಗಿದೆ.
2012: ವಂಶವಾಹಿಯಾಗಿ ಹರಡುವ ನಾಲ್ಕು ಪ್ರಕಾರದ ಸ್ತನ ಕ್ಯಾನ್ಸರ್ ರೋಗಗಳನ್ನು ವಿಜ್ಞಾನಿಗಳು ಈ ದಿನ ಪತ್ತೆ ಮಾಡಿದರು.