ಉಳ್ಳಾಲ ಕೋಡಿಯಲ್ಲಿ ರಕ್ತದಾನ ಶಿಬಿರ
ಉಳ್ಳಾಲ, ಸೆ.23: ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಫ್ರೆಂಡ್ಸ್ ಉಳ್ಳಾಲ ಇದರ ವತಿಯಿಂದ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಉಳ್ಳಾಲ ಕೋಡಿಯ ಸರಕಾರಿ ಉರ್ದು ಪ್ರೌಢ ಶಾಲಾ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಉಳ್ಳಾಲ ನಗರಸಭೆಯ ಸದಸ್ಯ ನಿಝಾಮ್ ಮಿಲ್ಲತ್ ನಗರ ಕಾರ್ಯಕ್ರಮ ಉದ್ಘಾಟಿಸಿದರು. ಮತ್ತೋರ್ವ ಸದಸ್ಯ ಅಯ್ಯೂಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಗರ ಸಭೆಯ ಸದಸ್ಯರಾದ ಅಸ್ಗರ್ ಅಲಿ, ರಮೀಝ್ ಕೋಡಿ, ಇಂಡಿಯನ್ ರೆಡ್ಕ್ರಾಸ್ ಬ್ಲಡ್ಬ್ಯಾಂಕ್ ತಾಂತ್ರಿಕ ಮುಖ್ಯಸ್ಥ ಎಡ್ವರ್ಡ್, ಬ್ಲಡ್ ಡೋನರ್ಸ್ ಮಂಗಳೂರು ಪ್ರಧಾನ ಕಾರ್ಯದರ್ಶಿ ನವಾಝ್ ಎಂ.ಬಿ., ಉಪಾಧ್ಯಕ್ಷರಾದ ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಕೋಶಾಧಿಕಾರಿ ಮುಸ್ತಫ ಕೆ.ಸಿ.ರೋಡ್, ಫ್ರೆಂಡ್ಸ್ ಉಳ್ಳಾಲ ಅಧ್ಯಕ್ಷ ತೌಫೀಕ್ ಕೋಡಿ, ರೆಡ್ಕ್ರಾಸ್ನ ಮುಖ್ಯಸ್ಥ ಪ್ರವೀಣ್ ಉಪಸ್ಥಿತರಿದ್ದರು.
Next Story