ಹಿರಿಯಡ್ಕ : ಶೆಡ್ಗೋಡೆ ಕುಸಿದು ಮೃತ್ಯು
ಹಿರಿಯಡ್ಕ, ಸೆ.24: ಶೆಡ್ನ ಗೋಡೆ ಮೈಮೇಲೆ ಕುಸಿದ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೆ.23ರಂದು ಮಧ್ಯಾಹ್ನ ವೇಳೆ ಕಣಜಾರು ಗ್ರಾಮದ ಪೆಲತ್ತೂರು ಎಂಬಲ್ಲಿ ನಡೆದಿದೆ.
ಮೃತರನ್ನು ರೇವಣ್ಣ(65) ಎಂದು ಗುರುತಿಸಲಾಗಿದೆ. ಇವರು ಕರುಣಾಕರ ಪೂಜಾರಿ ಎಂಬವರ ಮನೆಯ ಬಳಿ ನಿರ್ಮಿಸುತ್ತಿದ್ದ ಹಳೆಯ ಶೆಡ್ ದುರಸ್ತಿ ಕಾಮಗಾರಿಯನ್ನು ನೋಡಲು ಬಂದಿದ್ದು, ಈ ವೇಳೆ ಶೆಡ್ನ ಗೋಡೆಯು ಆಕಸ್ಮಿಕವಾಗಿ ಒಮ್ಮೆಲೇ ರೇವಣ್ಣರ ಮೈಮೇಲೆ ಕುಸಿದು ಬಿತ್ತೆನ್ನಲಾಗಿದೆ.
ಇದರಿಂದ ಮಣ್ಣಿನಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ರೇವಣ್ಣ ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story