ಕೋಳಿ ಅಂಕ: ಒಂಭತ್ತು ಮಂದಿ ಬಂಧನ
ಕಾರ್ಕಳ, ಸೆ.24: ಬೋಳ ಗ್ರಾಮದ ವಂಜಾರಕಟ್ಟೆ ಎಂಬಲ್ಲಿ ಸೆ.24ರಂದು ಮಧ್ಯಾಹ್ನ ವೇಳೆ ಕೋಳಿ ಅಂಕ ಜುಗಾರಿ ಆಡುತ್ತಿದ್ದ ಒಂಭತ್ತು ಮಂದಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಾಲಕೃಷ್ಣ ಪೂಜಾರಿ, ನವೀನ್ ಶೆಟ್ಟಿ, ದಿನೇಶ್ ಕುಲಾಲ್, ಹರೀಶ್ ಪೂಜಾರಿ, ಶಂಭು ಮೂಲ್ಯ, ದಿನೇಶ್ ಶೆಟ್ಟಿ, ಲ್ಯಾನ್ಸಿ ಡಿಸೋಜ, ಸತೀಶ್ ಶೆಟ್ಟಿ, ಹರೀಶ್ ಪೂಜಾರಿ ಬಂಧಿತ ಆರೋಪಿಗಳು. ಇವರಿಂದ 2500ರೂ. ಮೌಲ್ಯದ ಐದು ಕೋಳಿಗಳು, 3200ರೂ. ನಗದು, ಐದು ಬಾಳುಕತ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story